HEALTH TIPS

ಗಮಕಿಗಳ ಬಗ್ಗೆ ಪುಸ್ತಕ: ಮಾಹಿತಿ ಸಲ್ಲಿಸಲು ಸೂಚನೆ

                ಕಾಸರಗೋಡು: ಅವಿಭಜಿತ ದ.ಕ ಹಾಗೂ ಕಾಸರಗೋಡು ಜಿಲ್ಲೆಗಳ ಗಮಕ ಕಲೆಯ ವಾಚನ, ವ್ಯಾಖ್ಯಾನ ನಡೆಸುತ್ತಿರುವ ಕಲಾವಿದರ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ನೇತೃತ್ವದಲ್ಲಿ ಚಟುವಟಿಕೆ ನಡೆಯುತ್ತಿದೆ. 

                ಗಮಕ ವಾಚನ-ವ್ಯಾಖ್ಯಾನ ಕಲಾವಿದರು ಭಾವಚಿತ್ರ ಸೇರಿದಂತೆ ಪರಿಚಯ ಪತ್ರವನ್ನು ಅಕ್ಟೋಬರ್ 10ರ ಮುಂಚಿತವಾಗಿ ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಥವಾ ಕಾರ್ಯದರ್ಶಿ ವಿ.ಬಿ ಕುಳಮರ್ವ ಅವರಿಗೆ ತಲುಪಿಸಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ 9746631456 ಅಥವಾ 9446484585 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries