ಕಾಸರಗೋಡು: ವೊಕೇಶನಲ್ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಅತ್ಯುತ್ತಮ ಎನ್.ಎಸ್.ಎಸ್. ಯೂನಿಟ್ ಗಿರುವ ಜಿಲ್ಲಾಮಟ್ಟದ ಪ್ರಶಸ್ತಿಗೆ ಇರಿಯಣ್ಣಿ ವಿ.ಎಚ್.ಎಸ್. ಶಾಲೆ ಆಯ್ಕೆಯಾಗಿದೆ. ಕೊವಿಡ್ ಕ್ವಾರೆಂಟೈನ್ ಕೇಂದ್ರಕ್ಕೆ ಔಷಧ-ಆಹಾರವಿತರಣೆಯಿಂದ ತೊಡಗಿ ಸ್ವಯಂಸೇವಕರು ತಮ್ಮ ನಿವಾಸಗಳಲ್ಲಿ ನಡೆಸಿದ ತರಕಾರಿ ಕೃಷಿ ವರೆಗಿನ ಸಾಧನೆಗಳನ್ನು ಪರಿಶೀಲಿಸಿ ಈಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಜೀವನ್ ಬಾಬು ಅವರು ಈ ಪ್ರಶಸ್ತಿ ಘೋಷಣೆ ನಡೆಸಿದ್ದಾರೆ.

