ನವದೆಹಲಿ: ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್ ರಾಷ್ಟ್ರವ್ಯಾಪಿ ಉಚಿತ ಲಸಿಕೆ ಅಭಿಯಾನವನ್ನು ಆಯೋಜಿಸಿದೆ. ದೇಶಾದ್ಯಂತ ಇರುವ 200 ಅಪೋಲೊ ಆಸ್ಪತ್ರೆಗಳಲ್ಲಿ ಈ ಅಭಿಯಾನ ಜಾರಿಗೊಳ್ಳುತ್ತಿದೆ.
ಅಭಿಯಾನದ ಭಾಗವಾಗಿ ಅಪೊಲೊ ಆಸ್ಪತ್ರೆಗಳ 200 ಕೇಂದ್ರಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜನೆಗೊಳ್ಳಲಿದೆ. ತೃತೀಯ ಲಿಂಗಿ ಸಮುದಾಯಗಳು ಮತ್ತು ಅವರಿಗಾಗಿ ಕೆಲಸ ನಿರ್ವಹಿಸುತ್ತಿರುವ ಎನ್ ಜಿಒಗಳು ಈ ಅಭಿಯಾನದಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಲಬಹುದು.
ತೃತೀಯ ಲಿಂಗಿಗಳು ತಮ್ಮ ಪ್ರದೇಶದ ಹತ್ತಿರದಲ್ಲಿರುವ ಅಪೊಲೊ ಆಸ್ಪತ್ರೆಗೆ ತೆರಳಿ ಉಚಿತ ಲಸಿಕೆ ಪಡೆದುಕೊಳ್ಳಬಹುದು. ಮುಂದಿನ ಆರು ತಿಂಗಳಲ್ಲಿ ತೃತೀಯ ಲಿಂಗಿಗಳ ಸಮುದಾಯದ ಎಲ್ಲಾ ಸದಸ್ಯರಿಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ಅಭಿಯಾನದ ಗುರಿ.


