ಮಂಜೇಶ್ವರ: ದೇಶದ ಪ್ರಧಾನಿ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದರೆ, ಕೇರಳದಲ್ಲಿ ಮತಿಯವಾದಿ ಗಳನ್ನು ಎಡರಂಗ ವೋಟ್ ಬ್ಯಾಂಕ್ ಮಾಡಲು ರಾಜಕೀಯ ತಂತ್ರ ಮಾಡುತ್ತಿದೆ. ಚರ್ಚಿನ ಗುರುಗಳು ನಾರ್ಕೋಟಿಕ್ ಜಿಹಾದ್ ಬಗ್ಗೆ ಹೇಳಿದರೆ ಕೇರಳದಲ್ಲಿ ಕೆಲವರು ಕುಂಬಳಕಾಯಿ ಕಳ್ಳರಂತೆ ವರ್ತಿಸುತ್ತಾರೆ. ಇವರೇ ಮತೀಯವಾದಿ ಗಳು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲ ಕುಟ್ಟಿ ಹೇಳಿದರು.
ಬಿಜೆಪಿ ಬೂತ್ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ ಯವರಿಗೆ ಹುಟ್ಟು ಹಬ್ಬದ ಸಂದೇಶ ತಿಳಿಸಿ ನಡೆಸುವ, ಕೋಟ್ಯಾಂತರ ಜನತೆಗೆ ಕೋವಿಡ್ ಚುಚ್ಚುಮದ್ದು ನೀಡಿದ ಮೋದಿ ಯವರಿಗೆ ಕೃತಜ್ಞತೆ ತಿಳಿಸಿ ನಡೆಸುವ ಪೋಸ್ಟ್ ಕಾರ್ಡ್ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮಂಜೇಶ್ವರದ ಮದನಂತೇಶ್ವರ ಅಂಚೆ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ನ್ಯಾಯವಾದಿ ನವೀನ್ ರಾಜ್, ಬಾಬು ಮಾಸ್ತರ್, ಹರಿಶ್ಚಂದ್ರ, ಅಶ್ವಿನಿ ಪಜ್ವ, ಸರೋಜ ಬಲ್ಲಾಳ್, ರಾಜೇಶ್ ತೂಮಿನಾಡು, ಸಂತೋಷ್ ಅಡ್ಕ ಮೊದಲಾದವರು ಉಪಸ್ಥಿತರಿದ್ದರು. ಆದರ್ಶ್ ಬಿಎಂ ಸ್ವಾಗತಿಸಿ ಸಂತೋಷ್ ದೈಗೊಳಿ ವಂದಿಸಿದರು.





