ಕುಂಬಳೆ: ಎಸ್ ಡಿ ಪಿ ಐ ಕುಂಬಳೆ ಆರಿಕ್ಕಾಡಿ ಕಡವತ್ ಶಾಖೆಯ ಅಧ್ಯಕ್ಷ ಜೈನುದ್ದೀನ್ ಅವರ ಹತ್ಯೆಗೆ ಯತ್ನಿಸಿದ ಆರೋಪಿಗಳ ಪತ್ತೆಗೆ ಈವರೆಗೂ ಸಾಧ್ಯವಾಗದಿರುವುದು ಹೇಯಕರ ಎಂದು ಎಸ್‍ಡಿಪಿಐ ಮಂಜೇಶ್ವರ ಮಂಡಲ ಸಮಿತಿಯು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದೆ.
ಆರೋಪಿಗಳನ್ನು ಶೀಘ್ರ ಬಂಧಿಸಲು ಪೋಲೀಸರು ಸಿದರಾಗದಿದ್ದರೆ ಎಸ್.ಡಿ.ಪಿ.ಐ ನೇತೃತ್ವದಲ್ಲಿ ಮುಷ್ಕರ ನಡೆಸಲಾಗುವುದೆಂದು ನಾಯಕರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿಪಿಐ ಮುಖಂಡರಾದ ಮಂಜೇಶ್ವರ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ, ಜಿಲ್ಲಾ ಕಾರ್ಯದರ್ಶಿ ಮುಬಾರಕ್ ಕಡಂಬಾರ್, ಮಂಡಲ ಸಮಿತಿ ಸದಸ್ಯ ಅಲಿ ಶಹಾಮ, ಕುಂಬಳೆ ಪಂಚಾಯತಿ ಘಟಕದ ಅಧ್ಯಕ್ಷ ನಾಸರ್ ಬಂಬ್ರಾಣ ಮತ್ತು ಕಾರ್ಯದರ್ಶಿ ಸಲಾಂ ಕುಂಬಳೆ ಉಪಸ್ಥಿತರಿದ್ದರು.




