HEALTH TIPS

ಒಪ್ಪಂದ ಆಧಾರಿತ ಭದ್ರತಾ ಸಿಬ್ಬಂದಿಗೆ ಒಂದು ವರ್ಷದಿಂದ ವೇತನ ಇಲ್ಲ; ಪೇ ಸ್ಲಿಪ್ ಕೂಡ ನೀಡುವುದಿಲ್ಲ;ಬಿ.ಎಸ್.ಎನ್.ಎಲ್. ವೇತನ ವಂಚಿತರಾದ ಗುತ್ತಿಗೆ ನೌಕರರ ಅಳಲು

    

               ಕೊಟ್ಟಾಯಂ: ಬಿ.ಎಸ್.ಎನ್.ಎಲ್. ವಿನಿಮಯ ಕೇಂದ್ರದ ತಾತ್ಕಾಲಿಕ ಭದ್ರತಾ ಸಿಬ್ಬಂದಿಗಳಿಗೆ ಕಳೆದ ಒಂದು ವರ್ಷದಿಂದ ಸಂಬಳ ನೀಡಿಲ್ಲ ಎಂದು ದೂರಲಾಗಿದೆ. ಕೊಟ್ಟಾಯಂ ಜಿಲ್ಲೆಯ ಭದ್ರತಾ ಸಿಬ್ಬಂದಿಗಳು ದೂರಿನೊಂದಿಗೆ ಈ ವಿಷಯ ಬೆಳಕಿಗೆ ಬಂದಿದ್ದು, ಇತರ ಜಿಲ್ಲೆಗಳಲ್ಲೂ ತಾತ್ಕಾಲಿಕ ಭದ್ರತಾ ಸಿಬ್ಬಂದಿಗಳಿಗೆ ಎಂಟರಿಂದ ಹತ್ತು ತಿಂಗಳುಗಳಿಂದ ಸಂಬಳ ನೀಡಿಲ್ಲ ಎಂದೂ ತಿಳಿಯಲಾಗಿದೆ. 

                      ಕೊಟ್ಟಾಯಂ ಜಿಲ್ಲೆಯ ಸುಮಾರು 60 ಪರಿಣತರು ಕಾಯಂಕುಳಂನಲ್ಲಿ ಐಐಎಂಎಸ್ ಸಂಸ್ಥೆಯ ಮೂಲಕ ಬಿಎಸ್‍ಎನ್‍ಎಲ್‍ನ ವಿವಿಧ ವಿನಿಮಯ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜುಲೈ 9, 2021 ರಂದು ಐಐಎಂಎಸ್ ಡಿಟೆಕ್ಟಿವ್ ಒಪ್ಪಂದದ ಅವಧಿ ಮುಗಿದ ಬಳಿಕ, ಅವರು ಹಿಂತೆಗೆದುಕೊಂಡರು ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್‍ನ ಸಾಯಿ ಟೆಲಿಮ್ಯಾಟಿಕ್ಸ್ ಒಪ್ಪಂದವನ್ನು ವಹಿಸಿಕೊಂಡಿತು. ಇದರ ಪರಿಣಾಮವಾಗಿ, ಎಲ್ಲಾ 60 ಉದ್ಯೋಗಿಗಳು ಜುಲೈ 10, 2021 ರಿಂದ ಸಾಯಿ ಟೆಲಿಮ್ಯಾಟಿಕ್ಸ್ ವ್ಯಾಪ್ತಿಗೆ ಒಳಪಟ್ಟರು.  ಆದರೆ ಐಐಎಂಎಸ್ ಹಿಂತೆಗೆದುಕೊಂಡಾಗ, ಅವರು ಸೆಪ್ಟೆಂಬರ್ 2020 ರಿಂದ ನೌಕರರಿಗೆ ತಮ್ಮ ಸಂಪೂರ್ಣ ವೇತನ ಬಾಕಿ ಪಾವತಿಸಲು ಸಿದ್ಧರಿರಲಿಲ್ಲ. ಅಂದಿನಿಂದ ತಮಗೆ ವೇತನ ನೀಡಿಲ್ಲ ಎಂದು ಭದ್ರತಾ ಸಿಬ್ಬಂದಿಗಳು ದೂರಿದ್ದಾರೆ.


                    ಜುಲೈ ಮತ್ತು ಆಗಸ್ಟ್ 2020 ರ ಸಂಬಳವನ್ನು ಮೇ 2021 ರಲ್ಲಿ ನೀಡಲಾಯಿತು. ಈ ವರ್ಷ ಆಗಸ್ಟ್ 19 ರಂದು ಐಐಎಂಎಸ್ 5,000 ರೂ. ಮತ್ತು ಸಾಯಿ ಟೆಲಿಮ್ಯಾಟಿಕ್ಸ್ 2,100 ರೂ.ನೀಡಿತ್ತು.

                ಅವರು ಬಿಎಸ್‍ಎನ್‍ಎಲ್ ಮತ್ತು ಐಐಎಂಎಸ್‍ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆ ಕಾರ್ಮಿಕರನ್ನು ನಿರ್ಲಕ್ಷಿಸಲಾಗುತ್ತಿದೆ  ಮತ್ತು ಖಾಯಂ ಉದ್ಯೋಗಿಗಳಿಗೆ ಎಲ್ಲಾ ಪ್ರಯೋಜನಗಳನ್ನು ನಿಖರವಾಗಿ ಪಾವತಿಸಲಾಗುತ್ತಿದೆ. ಆದರೆ ಬಿಎಸ್‍ಎನ್‍ಎಲ್‍ಗೆ ದೂರು ನೀಡಿದಾಗ, ಯಾವುದೇ ನಿಧಿ ಇಲ್ಲ ಎಂದು ಉತ್ತರಿಸಲಾಗುತ್ತಿದೆ. ಹಾಗಿದ್ದಲ್ಲಿ, ಖಾಯಂ ಉದ್ಯೋಗಿಗಳಿಗೆ ಹೇಗೆ ಪಾವತಿಸಲಾಗುತ್ತದೆ ಎಂದು ಗುತ್ತಿಗೆ ನೌಕರರು ಕೇಳುತ್ತಾರೆ. 

              ಮಿಲಿಟರಿಯಿಂದ ನಿವೃತ್ತರಾದವರು ಬಿಎಸ್‍ಎನ್‍ಎಲ್‍ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಅವರು ಅಲ್ಪ ಪಿಂಚಣಿಯಲ್ಲಿ ಬದುಕಲು ಸಾಧ್ಯವಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಹಣ ಕೂಡ ಸಿಗದ ಕಾರಣ ಅವರು ಸಾರಿಗೆ ಮತ್ತು ಆಹಾರದ ವೆಚ್ಚವನ್ನು ಭರಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

                     ಐಐಎಂಎಸ್ ಸಂಸ್ಥೆ ಪಿಎಫ್ ನ್ನು ಸರಿಯಾಗಿ ಪಾವತಿಸುವುದಿಲ್ಲ ಎಂದು ದೂರಲಾಗಿದೆ.  ಆಯಾ ತಿಂಗಳ ಸಂಬಳವನ್ನು ಸಹ ನೀಡಲಾಗಿಲ್ಲ. ಆದ್ದರಿಂದ, ಸಂಬಳ ಎಷ್ಟು ಅಥವಾ ಎಷ್ಟು ಕಡಿತಗೊಳಿಸಲಾಗುತ್ತಿದೆ ಎಂದು ತಿಳಿಯಲು ಸಾಧ್ಯವಿಲ್ಲ. ವೇತನ ಚೀಟಿ ಕೇಳಿದಾಗ, ಒಂದೋ  ಕೆಲಸ ಮಾಡಬೇಕು, ಅಥವಾ ಕಂಪನಿಯ ಕೆಲಸ ಬಿಡಬೇಕೆಂದು ಬೆದರಿಸುತ್ತಿರುವುದಾಗಿ ಅವರು ದೂರುತ್ತಾರೆ.

                      ಆಲಪ್ಪುಳ ಜಿಲ್ಲೆಯ ಬಿಎಸ್‍ಎನ್‍ಎಲ್ ಭದ್ರತಾ ಸಿಬ್ಬಂದಿ ಈ ವರ್ಷದ ಜನವರಿಯವರೆಗೆ ಮಾತ್ರ ತಮ್ಮ ವೇತನವನ್ನು ಪಡೆದಿದ್ದಾರೆ. ಬಿಎಸ್‍ಎನ್‍ಎಲ್ ಮತ್ತು ಐಐಎಂಎಸ್ ಒಂದು ವರ್ಷದಿಂದ ಮಾಡಿದ ಕೆಲಸಕ್ಕೆ ವೇತನವನ್ನು ತಡೆಹಿಡಿಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ. 

               ಕಾಸರಗೋಡು ಸಹಿತ ಇತರ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಇದೆ ಎನ್ನಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries