ಕಾಸರಗೋಡು|: ಕಾಸರಗೋಡು ಜಿಲ್ಲೆಯ 2 ಸ್ಥಳೀಯ ಹೆದ್ದಾರಿಗಳ ಉದ್ಘಾಟನೆ ಸೆ.13ರಂದು ಜರುಗಲಿದೆ.
ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನ ಮೀರ್ಕಾನಂ-ಕುರುಂಜೇರಿ-ನೀಲಿವರಂಞೂರು ರಸ್ತೆ ಮತ್ತು ಉಮ್ಮಿಚ್ಚಿ ಪೆÇಯಿಲ್-ಚೆಂಬೇನ ರಸ್ತೆಗಳು ಈ ಮೂಲಕ ಉದ್ಘಾಟನೆಗೊಳ್ಳುವುವು.
ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಯೋಜನೆ ಅಂಗವಾಗಿ ಈ ಕಾರ್ಯಕ್ರಮ ಜರುಗಲಿದೆ. ಆನ್ ಲೈನ್ ರೂಪದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಸ್ತೆಗಳ ಉದ್ಘಾಟನೆ ನೆರವೇರಿಸುವರು. ಸ್ಥಳೀಯಾಡಳಿತ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅಧ್ಯಕ್ಷತೆ ವಹಿಸುವರು. ಶಾಸಕ ಇ.ಚಂದ್ರಶೇಖರನ್ ಅವರ ಸ್ಥಳಿಯಾಭಿವೃದ್ಧಿ ನಿಧಿಯಿಂದ ಮಂಜೂರು ಮಾಡಿರುವ ಮೊಬಲಗಿನಿಂದ ರಸ್ತೆ ನಿರ್ಮಿಸಲಾಗಿದೆ.


