ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಸಾಂತ್ವನ ಬಡ್ಸ್ ಶಾಲೆಯಲ್ಲಿ ಬಿಲ್ಡಫ್ ಕಾಸರಗೋಡಿನ ನೇತೃತ್ವದಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಗಾರ ನಡೆಯಿತು.
ಬಿಲ್ಡಫ್ ಕಾಸರಗೋಡು ಸಂಘಟನೆಯ ನೇತೃತ್ವದಲ್ಲಿ ಸಾಮಾಜಿಕ ಸೇವಾ ಕಾರುಣ್ಯ ಚಟುವಟಿಕೆಯ ಅಂಗವಾಗಿ ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳಿಗೆ ವರದಾನವಾಗಿ ಪೇಪರ್ ಸೀಡ್ ಪೆನ್ ಯೋಜನೆಯಂತೆ ಪೇಪರ್ ಸೀಡ್ ಪೆನ್ ನಿರ್ಮಾಣ ಸ್ವ ಉದ್ಯೋಗ ಕಾರ್ಯಗಾರ ನಡೆಯಿತು.
ಎಣ್ಮಕಜೆ ಗ್ರಾ. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಬಿಲ್ಡಫ್ ಕಾಸರಗೋಡಿನ ಕಾರ್ಯಧ್ಯಕ್ಷ ಕೂಕಲ ಬಾಲಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ರವೀಂದ್ರನ್ ಕಣ್ಣಂಗೈ ಸಂಪನ್ಮೂಲ ವ್ಯಕ್ತಿಯಾಗಿದ್ದರು.ಪ್ರಧಾನ ಕಾರ್ಯದರ್ಶಿ ಡಾ.ಷೇಕ್ ಬಾವ ಸೇಟ್,ಕಾರ್ಯದರ್ಶಿ ಡಾ.ರಶ್ಮಿ ಪ್ರಕಾಶ್, ಪಂಚಾಯತ್ ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಎ.ಕುಲಾಲ್ , ಸೌದಾಭಿ ಹನೀಫ್, ಪಂ.ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ, ಮಹೇಶ್ ಭಟ್,ಜ್ಯೋತಿ ಟೀಚರ್,ಸೈಪುಲ್ಲ ತಂಞಳ್ ಮಾತನಾಡಿದರು.





