ಮಂಜೇಶ್ವರ: ಸಿಪಿಐಎಂ ಮಂಜೇಶ್ವರ ಹೊಸಬೆಟ್ಟು ಎರಡನೇ ಬ್ರಾಂಚ್ ಸಮ್ಮೇಳನ ಶುಕ್ರವಾರ ನಡೆಯಿತು.
ಬಿಎಂ ಮೊೈದ್ದೀನಬ್ಬ ಧ್ವಜಾರೋಹಣಗೈದರು. ಸಿಪಿಎಂ ಮಂಜೇಶ್ವರ ವಲಯ ಕಾರ್ಯದರ್ಶಿ ಕೆ.ವಿ.ಕುಂಞ್ಞ ರಾಮನ್ ಉದ್ಘಾಟಿಸಿದರು.ಲೋಹಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ಜಯಾನಂದ, ಚಂದ್ರಹಾಸ ಶೆಟ್ಟಿ ಮಾಸ್ತರ್, ರಾಮದಾಸ್ ಕೆ., ಇಬ್ರಾಹಿಂ ರಾಮತ್ತಮಜಲು, ವಿಜಯ ಕನಿಲ, ದಯಾಕರ ಕೆ. ಮೊದಲಾದವರು ಉಪಸ್ಥಿತರಿದ್ದರು. ಬಿ.ಎಂ.ಕರುಣಾಕರ ಶೆಟಿ ವರದಿ ಮಂಡಿಸಿದರು. ಹಾಸಿಲ್ ಎಂ.ಕೆ ಅವರು ರಕ್ತಸಾಕ್ಷಿ ಹಾಗೂ ಶ್ರದ್ದಾಂಜಲಿ ಪ್ರಮೇಯ ವಾಚಿಸಿದರು.
ವಾಹನಗಳ ಸುಗಮ ಸಂಚಾರಕ್ಕೆ ಮಂಜೇಶ್ವರ-ಹೊಸಂಗಡಿ ರಸ್ತೆಯ ಅಗಲೀಕರಣ, ಮಂಜೇಶ್ವ ರ ಬಂದರನ್ನು ಮೀನುಗಾರಿಕೆಗೆ ಬಳಸುವುದು, ತಲಪಾಡಿ ಗಡಿ ಸಮಸ್ಯೆಯನ್ನು ಶಾಶ್ವತವಾಗಿ ಶೀಘ್ರ ಪರಿಹರಿಸಲು ತುರ್ತು ಕ್ರಮ ಕೈಗೊಳ್ಳುವುದೇ ಮೊದಲಾದ ಒತ್ತಾಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಪಕ್ಷದ ನೂತನ ಸಮಿತಿಗಳಾದ ಗುಡ್ಡೆಕೇರಿಗೆ ಕರುಣಾಕರ ಶೆಟ್ಟಿ, ಕಡಪ್ಪುರ ಸಮಿತಿಗೆ ಅಶ್ರಫ್ ಗುಡ್ಡೆಕೇರಿ, ಬಂಗ್ರಮಂಜೇಶ್ವರ ಸಮಿತಿಗೆ ಲೋಹಿತ್ ಕುಮಾರ್ ಎಂಬವರನ್ನು ಕಾರ್ಯದರ್ಶಿಗಳಾಗಿ ನೇಮಿಸಲಾಯಿತು. ಘಟಕ ಕಾರ್ಯದರ್ಶಿ ಬಿ.ಎಂ.ಕರುಣಾಕರ ಶೆಟ್ಟಿ ಸ್ವಾಗತಿಸಿ, ಬಿ.ಎಂ.ಮನೋಹರ ಶೆಟ್ಟಿ ವಂದಿಸಿದರು.


