ಪೆರ್ಲ: ಏಮ್ಸ್ ಕಾಸರಗೋಡು ಜನಪರ ಸಂಘಟನೆಯ ನೇತೃತ್ವದಲ್ಲಿ ನಡೆದ ಮಂಜೇಶ್ವರ ಮಂಡಲ ವಾಹನ ಪ್ರಚಾರ ಜಾಥಕ್ಕೆ ಪೆರ್ಲ ಪೇಟೆಯಿಂದ ಚಾಲನೆ ನೀಡಲಾಯಿತು.ಕಾಸರಗೋಡು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹಿಸಿ ಸೆ.30ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಯುವ ಉಪವಾಸ ಧರಣಿಯ ಪೂರ್ವಭಾವಿಯಾಗಿ ಹಮ್ಮಿಕೊಂಡ ಪ್ರಚಾರ ಜಾಥವನ್ನು
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಜಾಥಾ ಲೀಡರ್ ಸುಲೈಖಾ ಮಾಹೀನ್ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಎಂಡೋಸಲ್ಫಾನ್ ಸಹಿತ ಅನೇಕ ರೋಗಗಳಿರುವ ಗಡಿನಾಡಿನ ಪರಿಸ್ಥಿತಿಯನ್ನು ಮನಗಂಡು ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಯಲ್ಲಿಯೇ ಸ್ಥಾಪಿಸುವ ಬಗ್ಗೆ ಕೇರಳ ಸರಕಾರ ಕೇಂದ್ರವನ್ನು ಒತ್ತಾಯಿಸಬೇಕೆಂದು ಆಗ್ರಹಿಸಿದರು.
ವ್ಯಾಪಾರಿ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ಶ್ರೀಕೃಷ್ಣ ಪೈ ಸಭೆಯ ಅಧ್ಯಕ್ಷತೆವಹಿಸಿದ್ದರು.ರಾಘವ ಚೇರಾಲ್ ಮಾಹಿತಿ ನೀಡಿದರು.ಎಣ್ಮಕಜೆ ಪಂ ಉಪಾಧ್ಯಕ್ಷೆ ಫಾತಿಮತ್ ಝಹನಾಸ್ ಹಂಸಾರ್, ಜಾಥಾದ ಸಂಚಾಲಕ ಗೋಲ್ಡನ್ ರಹಮಾನ್,ಎಣ್ಮಕಜೆ ಪಂ. ಮಾಜಿ ಉಪಾಧ್ಯಕ್ಷರಾದ ಆಯಿಷಾ ಎ.ಎ, ಸಿದ್ದೀಕ್ ಹಾಜಿ ಖಂಡಿಗೆ,ನಾಸಿರ್ ಚೆರ್ಕಳ,ಹಕ್ಕಿಂ ಖಂಡಿಗೆ,ಸಿದ್ದೀಕ್ ಕೈಕಂಬ,ಶ್ರೀನಿವಾಸ್ ಶೆಣೈ ಮೊದಲಾದವರು ಭಾಗವಹಿಸಿದ್ದರು.


