ತಿರುವನಂತಪುರಂ: ಕೇರಳ ರಾಜ್ಯದ ಅತ್ಯಂತ ಜನಪ್ರಿಯ ಟಿವಿ ಧಾರಾವಾಹಿ ನಟ ರಮೇಶ್ ವಲಿಯಶಾಳ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಎರಡು ದಶಕಗಳಿಂದ ಮಾಲಿವುಡ್ನಲ್ಲಿ ಚಿರಪರಿಚಿತರಾಗಿದ್ದ ರಮೇಶ್ ವಲಿಯಶಾಳ ಅವರು ಅವರು ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ ಮಾಡುತ್ತಿರುವಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಕಿರುತೆರೆಯಲ್ಲೂ ಮಿಂಚಿದ್ದರು. ಶನಿವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕೆಲ ವರ್ಷಗಳಿಂದ ರಮೇಶ್ ತನ್ನ ಎರಡನೇ ಪತ್ನಿ ಮತ್ತು ಮಗನೊಂದಿಗೆ ವಾಲಿಯಶಾಳದಲ್ಲಿ ವಾಸಿಸುತ್ತಿದ್ದರು. ಎರಡು ದಿನಗಳ ಹಿಂದೆ ತಮ್ಮ ಹೊಸ ಪ್ರಾಜೆಕ್ಟ್ಗಾಗಿ ಶೂಟಿಂಗ್ ಸ್ಥಳದಿಂದ ಹಿಂದಿರುಗಿದ್ದರು. ಇದೀಗ ಅವರ ಶವ ಪತ್ತೆಯಾಗಿದೆ. ಮೃತದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೀಡಾಗಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.


