HEALTH TIPS

ಕಾಡುಹಂದಿಗಳ ನಿಗ್ರಹಕ್ಕೆ ಕೊನೆಗೂ ಲಭಿಸಿದ ಅನುಮತಿ-ಕೃಷಿಕರು ನಿರಾಳ

                                                      

                ಕಾಸರಗೋಡು: ಕೃಷಿಕರಿಗೆ ತಲೆನೋವು ತಂದುಕೊಟ್ಟಿದ್ದ ಕಾಡುಹಂದಿಗಳ ನಿಗ್ರಹಕ್ಕೆ ಕೊನೆಗೂ ಸರ್ಕಾರದಿಂದ ಹಸಿರು ನಿಶಾನಿ ಲಭಿಸಿದ್ದು, ನಿಬಂಧನೆಗಳ ಮೂಲಕ ಕಾಡುಹಂದಿಗಳನ್ನು ಕೊಲ್ಲಲು ಅನುಮತಿ ಮಂಜೂರಾಗಿ ದೊರೆತಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಹತ್ತು ಮಂದಿ ಕೃಷಿಕರಿಗೆ ಕಾಡು ಹಂದಿಗಳನ್ನು ಕೊಲ್ಲಲು ಅರಣ್ಯ ಇಲಾಖೆ ಅನುಮತಿ ಮಂಜೂರುಗೊಳಿಸಿದೆ. ಕಾಸರಗೋಡು ಜಿಲ್ಲೆಯ ಮುಳಿಯಾರ್‍ನ ಇಬ್ಬರು, ಧರ್ಮತ್ತಡ್ಕ, ಕಿನ್ನಿಂಗಾರ್, ಪಾಲಚ್ಚಾಲ್, ಕೋಡೋತ್, ಕೂಡ್ಲು, ಚೀಮೇನಿ, ಅಂಬಲತ್ತರ ಹಾಗೂ ಕಾನತ್ತೂರಿನ ತಲಾ ಒಬ್ಬ ಕೃಷಿಕಗೆ ಈ ಅನುಮತಿ ನೀಡಲಾಗಿದೆ.

              ಕಾಡುಹಂದಿಗಳನ್ನು ಬೇಟೆಯಾಡುವುದು ಯಾ ಅವುಗಳಿಗೆ ಉಪದ್ರವಿಸುವುದು ನಿಷಿದ್ಧವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೃಷಿಕರು ಕಾಡುಹಂದಿಗಳ ಉಪಟಳದಿಂದ ಕಂಗಾಲಾಗಿದ್ದು,  ಈ ಬಗ್ಗೆ ಕೃಷಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿರುವುದನ್ನು ಪತ್ತೆಹಚ್ಚಲಾಗಿದ್ದು, ಈ ಪ್ರದೇಶದಲ್ಲಿ ಕೃಷಿನಾಶ ವ್ಯಾಪಕವಾಗುತ್ತಿರುವುದನ್ನು ಮನಗಂಡು ಕಾಡುಹಂದಿಗಳ ನಿಗ್ರಹಕ್ಕೆ ಸರ್ಕಾರ ಮುಂದಾಗಿತ್ತು.  ಪರವಾನಗಿ ಹೊಂದಿರುವ ಕೋವಿಯ ಮಾಲಿಕರಿಗೆ ಮಾತ್ರ ಹಂದಿ ಬೇಟೆಗೆ ಅವಕಾಶ ಕಲ್ಪಿಸಲಾಗಿದೆ.

                          ಕಾರ್ಯಾಚರಣೆ ಹೇಗೆ:

               ಕಾಡುಹಂದಿಗಳ ಉಪಟಳ ಹೊಂದಿರುವ ಪ್ರದೇಶದ ಕೃಷಿಕರು ಮುಂಚಿತವಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಗಣಿಸಿ, ಜಿಲ್ಲಾ ಅರಣ್ಯಾಧಿಕಾರಿ ಸಂಬಂದಪಟ್ಟವರಿಗೆ ಅನುಮತಿ ನೀಡಲಿದ್ದಾರೆ. ಈ ಅನುಮತಿ ಪತ್ರಕ್ಕೆ ಒಂದು ವರ್ಷ ಕಾಲಾವಧಿಯಿರಲಿದೆ. ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯ ಪಡೆ, ಅರಣ್ಯ ಇಲಾಖೆಯಲ್ಲಿ ನೋಂದಾಯಿಸಿರುವ ಕೋವಿಗಳ ಮಾಲಿಕರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾಡುಹಂದಿಗಳ ನಿಗ್ರಹ ಕ್ರಮ  ನಡೆಯಲಿದೆ.

             ಕಾರ್ಯಚರಣೆ ಮೂಲಕ ಗುಂಡಿಟ್ಟು ಕೊಲ್ಲಲಾಗುವ ಕಾಡುಹಂದಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೀಮೆ ಎಣ್ಣೆ ಸುರಿದು ಹೊತ್ತಿಸುವುದು ಅಥವಾ ಮಣ್ಣಿನಡಿ ಹೂತುಹಾಕಬೇಕು ಎಂದು ಅರಣ್ಯ ಇಲಾಖೆ ನಿರ್ದೇಶನದಲ್ಲಿ ತಿಳಿಸಲಾಗಿದೆ. 

               ಕಾಡುಹಂದಿಯನ್ನು ಉಪಟಳನೀಡುವ ಪ್ರಾಣಿ ಎಂದುಪರಿಗಣಿಸುವಂತೆ ಕೇರಳ ಸರ್ಕಾರ ಕೇಂದ್ರವನ್ನು ಈ ಹಿಂದೆ ಆಗ್ರಹಿಸಿತ್ತು. ಜತೆಗೆ ರಾಜ್ಯದ 12ಮಂA Marlin lever action rifle that can be legally owned and used under certain circumstances in Britain by a person with a suitable firearms licence Stock Photoದಿ ಕೃಷಿಕರು ಹಂದಿಗಳ ನಿಗ್ರಹಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ವಯ ಕಾಡುಹಂದಿಗಳ ನಿಗ್ರಹಕ್ಕೆ ಹೈಕೋರ್ಟು ಒಪ್ಪಿಗೆ ಸೂಚಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries