ತಿರುವನಂತಪುರಂ: ಕೇರಳದ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಾದ ಪೊನ್ಮುಡಿ ಮತ್ತು ಕಲ್ಲಾರ್ ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನು ಮುಚ್ಚಲಾಗಿದೆ. ವಿಠಾರ ಜಿಲ್ಲೆಯ ಕಲ್ಲಾರ್ ವಾರ್ಡ್‍ನಲ್ಲಿ ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 46 ಜನರಿಗೆ ಇಲ್ಲಿ ನಿನ್ನೆ ಸೋಂಕು ಪತ್ತೆಯಾಗಿದೆ. ಜಿಲ್ಲಾಡಳಿತವು ವಾರ್ಡ್ ನ್ನು ಕೊರೋನಾ ಕಂಟೋನ್ಮೆಂಟ್ ವಲಯವೆಂದು ಘೋಷಿಸಿದೆ. ಪೊನ್ಮುಡಿಗೆ ಹೋಗುವ ಪ್ರವಾಸಿಗರು ಆಗಾಗ್ಗೆ ಇಲ್ಲಿಗೆ ಇಳಿದು ಅಂಗಡಿಗಳಿಗೆ ಎಡತಾಕುತ್ತಾರೆ. ಸೋಂಕು ಹರಡುವಿಕೆಯನ್ನು ಇದು ಹೆಚ್ಚಿಸುವುದರಿಂದ ಸಂಚಾರ ನಿಷೇಧಿಸಲಾಗಿದೆ.
ರಾಜ್ಯದಲ್ಲಿ ಕೊರೋನಾ ವಿಸ್ತರಣೆಯಲ್ಲಿ ಸ್ವಲ್ಪ ಕುಸಿತವಾಗಿದ್ದರಿಂದ ಸರ್ಕಾರ ಮತ್ತಷ್ಟು ರಿಯಾಯಿತಿಗಳನ್ನು ಘೋಷಿಸಿತ್ತು. ಮಾಲ್‍ಗಳು ಮತ್ತು ಪ್ರವಾಸೋದ್ಯಮ ಕೇಂದ್ರಗಳನ್ನು ತೆರೆಯುವುದರಿಂದ, ಜನರ ಓಡಾಟ ಹೆಚ್ಚಾಗಿದೆ. ಅನೇಕ ಜನರು ರಜಾದಿನಗಳಲ್ಲಿ ಪ್ರವಾಸಿ ತಾಣಗಳಿಗೆ ಭ|ಏಟಿ ನೀಡತೊಡಗಿದ್ದಾರೆ. ಆದರೆ ಪ್ರವಾಸಿಗರನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ರೋಗ ಹರಡುವಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ಆರೋಪಗಳಿವೆ.






