ಕಾಸರಗೋಡು: ಕೀಯೂರ್ ಕಡಪ್ಪುರ ಸಮುದ್ರದಲ್ಲಿ ಮೀನುಹಿಡಿಯಲು ತೆರಳಿದ್ದ ದೋಣಿ ಮಗುಚಿಬಿದ್ದು, ಮೂರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕೀಯೂರ್ ಪಡಿಞËರ್ ನಿವಾಸಿ ಅಜ್‍ಮಲ್, ಅಶ್ರಫ್ ಹಾಗೂ ಮುನಾವರ್ ಗಾಂiÀiಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೀಯೂರು ಅಳಿವೆಯಿಂದ ಕಿ,ಮೀ ದೂರದಲ್ಲಿ ದೋಣಿ ಅಪಘಾತಕ್ಕೀಡಾಗಿದ್ದು, ತಕ್ಷಣ ಇತರ ಮೀನು ಕಾರ್ಮಿಕರು ಕಾರ್ಯಾಚರಣೆ ನಡೆಸಿ, ಮೂವರನ್ನೂ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ದೋಣಿ ಅಪಘಾತಕ್ಕೀಡಾಗಿರುವ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಹಗೂ ಕಾಞಂಗಾಡು ಡಿವೈಎಸ್‍ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.




