ಕಾಸರಗೋಡು: ಕೇರಳ ರಾಜ್ಯೋದಯ ಮತ್ತು ಆಡಳಿತೆ ಭಾಷೆ ಸಪ್ತಾಹ ಉದ್ಘಾಟನೆ ನ.1ರಂದು ಜಿಲ್ಲಾ ವಾರ್ತಾ ಕಚೇರಿಯ ಪಿ.ಆರ್.ಛೇಂಬರ್ ನಲ್ಲಿ ಜರುಗಲಿದೆ.
ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾಸರಗೋಡು ಜಿಲ್ಲಾ ಕಚೇರಿ, ಜಿಲ್ಲಾಡಳಿತ, ಜಿಲ್ಲಾಧಿಕಾರಿ ಸಿಬ್ಬಂದಿ ಮಂಡಳಿ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಉದ್ಘಾಟಿಸುವರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅಧ್ಯಕ್ಷತೆ ವಹಿಸುವರು. ಕನ್ನಡದ ಹಿರಿಯ ಸಾಧಕ ಮಲಾರ್ ಜಯರಾಮ ರೈ ಮತ್ತು ಮಲೆಯಾಳಂ ಸಾಹಿತಿ ರವೀಂದ್ರನ್ ಪಾಡಿ ಅವರನ್ನು ಗೌರವಿಸಲಾಗುವುದು. ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಗ್ರಂಥಲೋಕಂ ಸಂಪಾದಕ ಪಿ.ವಿ.ಕೆ.ಪನೆಯಾಲ್, ಪಿ.ಆರ್.ಡಿ.ಸಹಾಯಕ ಸಂಪಾದಕ ಪಿ.ಪಿ.ವಿನೀಷ್, ಜಿಲ್ಲಾಧಿಕಾರಿ ಸಿಬ್ಬಂದಿ ಮಂಡಳಿ ಕಾರ್ಯದರ್ಶಿ ಜಿ.ಸುರೇಶ್ ಬಾಬು, ಎ.ಐ.ಒ.ಪ್ರದೀಪ್ ಜಿ.ಎನ್. ಉಪಸ್ಥಿತರಿರುವರು.
ಮಲಾರ್ ಜಯರಾಮ ರೈ :
ಹಿರಿಯ ಪತ್ರಕರ್ತ ಮತ್ತು ಬಹುಭಾಷಾ ಸಾಹಿತಿ ಮಲಾರ್ ಜಯರಾಮ ರೈ ಅವರು ಕನ್ನಡ, ಆಂಗ್ಲ ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದವರು. ಸುಮಾರು 20 ಕೃತಿಗಳನ್ನು ರಚಿಸಿದ್ದಾರೆ. ಕನ್ನಡ, ತುಳು, ಆಂಗ್ಲ ಭಾಷೆಗಳಲ್ಲಿ ಅನೇಕ ಲೇಖನಗಳನ್ನು ರಚಿಸಿದ್ದಾರೆ. ಹಿಂದಿಯನ್ನು ಪದವಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು. ನವಭಾರತ ದಿನಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಅವರು 1973ರಿಂದ 1981 ವರೆಗೆ ಡೆಕ್ಕನ್ ಹೆರಾಲ್ಡ್ ಆಂಗ್ಲ ಪತ್ರಿಕೆಯ ಮಂಗಳೂರು ಜಿಲ್ಲಾ ವರದಿಗಾರರಾಗಿದ್ದರು. 2003ರಲ್ಲಿ ನಿವೃತ್ತಿಯ ನಂತರ ಸಾಂಸ್ಕøತಿಕವಾಗಿ ಸಕ್ರಿಯರಾಗಿದ್ದಾರೆ.
ರವೀಂದ್ರನ್ ಪಾಡಿ:
ಮಲೆಯಾಳಂನ ಹಿರಿಯ ಸಾಹಿತಿ ರವೀಂದ್ರನ್ ಪಾಡಿ ಅವರು ಕಾಸರಗೊಡಿನಲ್ಲಿ ಮುದ್ರಣಗೊಳ್ಳುವ ಉತ್ತರದೇಶಂ, ಕಾರವಲ್, ಕಾಸರಗೋಡು ವಾರ್ತಾ ಮತ್ತಿ ಸಿರಾಜ್ ದಿನಪತ್ರಿಕೆಯ ಸ್ಥಳೀಯ ವರದಿಗಾರರಾಗಿ ಸೇವೆ ಸಲ್ಲಿಸಿದವರು. ಅನೇಕ ಸಾಹಿತ್ಯ, ಐತಿಹಾಸಿಕ, ಆತ್ಮಚರಿತ್ರೆ ಕೃತಿಗಳನ್ನು ರಚಿಸಿದ್ದಾರೆ. ಇನ್ನೂ ಅನೇಕ ಪುಸ್ತಕಗಳು ರಚನೆಯಲ್ಲಿವೆ. ಈ ಹಿಂದೆ ಮುಂಬಯಿ, ಬೆಂಗಳೂರು, ಗೋವಾ, ಕೊಲ್ಲಿ ರಾಷ್ಟ್ರ ಸಹಿತ ವಿವಿಧೆಡೆ ದುಡಿದಿದ್ದಾರೆ.




