ಕಾಸರಗೋಡು: ಮಲೇರಿಯಾ ನಿಯಂತ್ರಣ ಅಂಗವಾಗಿ ಸೊಳ್ಳೆ ನಿವಾರಣೆ ಪ್ರಕ್ರಿಯೆ ಆರಂಭಗೊಂಡಿದೆ. ಕಾಸರಗೋಡು ಕಸಬ ಕರಾವಳಿಯಲ್ಲಿ ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ನೇತೃತ್ವದಲ್ಲಿ ಮನೆಯೊಳಗೆ ಕೀಟನಾಶಕ ಸಿಂಪಡಣೆ ಮೂಲಕ ಈ ಚಟುವಟಿಕೆ ಆರಂಭಗೊಂಡಿದೆ. 2020 ರಲ್ಲಿ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದ ಕಾಸರಗೋಡು ನಗರಸಭೆಯ 36,37,38 ವಾರ್ಡ್ ಗಳ 884 ಮನೆಗಳಲ್ಲಿ ನ.4 ವರೆಗೆ ಸೊಳ್ಳೆ ನಿವಾರಣೆ ನಡೆಯಲಿದೆ.
ನಗರಸಭೆ ಸದಸ್ಯರುಗಳಾದ ರಜನಿ ಕೆ., ಅಜಿತ್ ಕುಮಾರ್, ಉಮಾ ಎಂ. ತಮ್ಮ ವಾರ್ಡ್ ಮಟ್ಟದ ಚಟುವಟಿಕೆಗಳನ್ನು ಉದ್ಘಟಿಸಿದರು. ಪ್ರಭಾರ ಬಯಾಲಜಿಸ್ಟ್ ವಿ.ಸುರೇಶನ್, ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ಹೆಲ್ತ್ ಸೂಪರ್ವೈಸರ್ ಇ.ರಾಧಾಕೃಷ್ಣನ್ ನಾಯರ್, ಆರೋಗ್ಯ ಇನ್ಸ್ ಪೆಕ್ಟರ್ ಸರಸಿಜನ್ ತಂಬಿ, ಕ್ಷೇತ್ರ ಸಹಾಯಕರಾದ ದೇವದಾಸ್, ಎ.ವಿ.ದಾಮೋದರನ್ ಸ್ಪ್ರೇಯಿಂಗ್ ನ ಮೇಲ್ನೋಟ ವಹಿಸುತ್ತಿದ್ದಾರೆ.




