ಕಾಸರಗೋಡು: ಕೊಂಕಣಿ ಸಾಂಸ್ಕøತಿಕ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಅ.23 ರಂದು ಶನಿವಾರ ಸಂಜೆ 4.30ಕ್ಕೆ ಮಂಗಳೂರು ವಿ.ಟಿ. ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರದ ಸಭಾಂಗಣದ ದಿ. ವಿಠ್ಠಲ್ ಕುಡ್ವ ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ನಟ, ನಿರ್ದೇಶಕ, ರಂಗಕರ್ಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಇವರು ಕೊಂಕಣಿ ಭಾಷೆಗೆ ಭಾಷಾಂತರ ಮಾಡಿದ “ಸೂಣೆ” ಮತ್ತು “ಸೂಣೆಬಾಲ” ಎಂಬ ಎರಡು ಕೊಂಕಣಿ ನಾಟಕ ಪುಸ್ತಕಗಳನ್ನು ಖ್ಯಾತ ಉದ್ಯಮಿ ದೇವಗಿರಿ ಚಹಾ ಇದರ ಮಾಲಕರಾದ ಸಿಎ. ನಂದಗೋಪಾಲ್ ಶೆಣೈ ಅವರು ಕಾಸರಗೋಡು ಚಿನ್ನಾ ಇವರ ಗೌರವ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಿಸಲಿರುವರು.
ಪುಸ್ತಕದ ಪ್ರಥಮ ಪ್ರತಿಯನ್ನು ಮಂದಿರದ ಮೊಕ್ತೇಸರ ನರೇಶ್ ರಾಮದಾಸ್ ಕಿಣಿ ಸ್ವೀಕರಿಸಲಿರುವರು. ಶಕುಂತಲಾ ಆರ್. ಕಿಣಿ ಪುಸ್ತಕದ ಬಗ್ಗೆ ಮಾತನಾಡಲಿರುವರು. ಮುಖ್ಯ ಅತಿಥಿಗಳಾಗಿ
ರೋಯ್ ಕ್ಯಾಸ್ಟಲಿನೋ, ಕೆ.ಪಿ. ಪ್ರಶಾಂತ್ ರಾವ್, ವೆಂಕಟೇಶ್ ಬಾಳಿಗಾ, ಪ್ರಶಾಂತ್ ಶೇಟ್, ಗೋಪಿನಾಥ್ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಸಂಘದ ಅಧ್ಯಕ್ಷ ಗೋವಿಂದರಾಯ ಪ್ರಭು ಅಧ್ಯಕ್ಷತೆ ವಹಿಸಲಿರುವರು.




