ಬದಿಯಡ್ಕ: ಪರಿಶಿಷ್ಟ ಜಾತಿ ಅಭಿವೃದ್ದಿ ಇಲಾಖೆಯ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರ್ಚಾಲು ಸಮೀಪದ ಬೇಳ ಸರ್ಕಾರಿ ಐಟಿಐಯಲ್ಲಿ ಸ್ಪಾಟ್ ಅಡ್ಮಿಶನ್ ಗೆ ಆಸಕ್ತ ಎಸ್.ಸಿ., ಎಸ್.ಟಿ., ಒ.ಸಿ. ವಿಭಾಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಾಳೆ(ಅ.22) ಬೆಳಿಗ್ಗೆ 10ಕ್ಕೆ ಪ್ರವೇಶಾತಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಹತ್ತನೇ ತರಗತಿ ಸರ್ಟಿಫಿಕೇಟ್, ಟಿ.ಸಿ, ಸಿ.ಸಿ, ಜಾತಿ ಪ್ರಮಾಣ ಪತ್ರ, ಆಧಾರ್ ಗುರುತುಪತ್ರದೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ> 9995450781, 9895306231, 9846583125 ಸಂಪರ್ಕಿಸಬಹುದು.




