ಟಾಟಾ ಆಸ್ಪತ್ರೆಯಲ್ಲಿ ಅಟಂಡ್ ಶ್ರೇಣಿಯ ಹುದ್ದೆಗೆ ನೇಮಕಾತಿ
ಕಾಸರಗೋಡು: ಕಾಸರಗೋಡು ಟಾಟಾ ಟ್ರಸ್ಟ್ ಕೋವಿಡ್ ಆಸ್ಪತ್ರೆಯಲ್ಲಿ ಅಟಂಡ್ ಶ್ರೇಣಿಯ 2 ಹುದ್ದೆಗಳು ಬರಿದಾಗಿದ್ದು, ತಾತ್ಕಾಲಿಕ ಕರಾರು ಹಿನ್ನೆಲೆಯಲ್ಲಿ ನೇಮಕಾತಿ ನಡೆಸಲಾಗುವುದು. ಈ ಸಂಬಂದ ಸಂದರ್ಶನ ಅ.26ರಂದು ಬೆಳಗ್ಗೆ 10 ಗಂಟೆಗೆ ಕಾಞಂಗಾಡು ಚೆಮ್ಮಟ್ಟುಂವಯಲ್ ನ ಜಿಲ್ಲಾ ವೈದ್ಯಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. 7 ನೇ ತರಗತಿ ಕನಿಷ್ಠ ವಿದ್ಯಾರ್ಜತೆಯಾಗಿದೆ. ಅಸಲಿ ಅರ್ಹತಾಪತ್ರಗಳ ಸಹಿತ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಳಿಗೆ ದೂರವಾಣಿ ಸಂಖ್ಯೆ: 0467-2203118.
ಲಾಬ್ ಟೆಕ್ನೀಶಿಯನ್ ಹುದ್ದೆ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬರಿದಾಗಿರುವ ಲಾಬ್ ಟೆಕ್ನೀಶಿಯನ್ ಗಳ ಹುದ್ದೆಯಲ್ಲಿ ತಾತ್ಕಾಲಿಕ ನೇಮಕಾತಿ ನಡೆಸುವ ನಿಟ್ಟಿನಲ್ಲಿ ಸಂದರ್ಶನ ನ.5ರಂದು ಬೆಳಗ್ಗೆ 10 ಗಂಟೆಗೆ ಕಾಞಂಗಾಡು ಜಿಲ್ಲಾ ವೈದ್ಯಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಪ್ಲಸ್-ಟು ಸಯನ್ಸ್, ಬಿ.ಎಸ್.ಸಿ. ಎಂ.ಎಲ್.ಟಿ. ಯಾ ಡಿ.ಎಂ.ಎಲ್.ಟಿ. ಅರ್ಹತೆಹೊಂದಿರುವವರು, ಸರಕಾರಿ ಪಾರಾ ಮೆಡಿಕಲ್ ಕೌನ್ಸಿಲ್ ನೋಂದಣಿ ಹೊಂದಿರುವವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಳಿಗೆ ದೂರವಾಣಿ ಸಂಖ್ಯೆ: 04672203118.
ಶಿಕ್ಷಕ ಹುದ್ದೆ ಬರಿದು
ಕಾಸರಗೋಡು: ಕುಂಬಳೆ ಐ.ಎಚ್.ಆರ್.ಡಿ. ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ನಲ್ಲಿ ಇಕೆಕ್ಟ್ರಾನಿಕ್ಸ್, ಕಾಮರ್ಸ್ ವಿಷಯಗಳಲ್ಲಿ ಶಿಕ್ಷಕರ ಹುದ್ದೆ ಬರಿದಾಗಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಶೇ 55 ಕ್ಕಿಂತ ಕಡಿಮೆಯಿಲ್ಲದ ಅಂಕದೊಂದಿಗೆ ಸ್ನಾತಕೋತ್ತರ ಪದವಿ, ನೆಟ್ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಇಲೆಕ್ಟ್ರಾನಿಕ್ಸ್ ಶಿಕ್ಷಕರ ನೇಮಕಾತಿ ಸಂದರ್ಶನ ಅ.25ರಂದು ಬೆಳಗ್ಗೆ 11 ಗಂಟೆಗೆ, ಕಾಮರ್ಸ್ ಶಿಕ್ಷಕರ ನೇಮಕಾತಿ ಸಂದರ್ಶನ ಅ.26ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನಲ್ಲಿ ನಡೆಯಲಿದೆ. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆಗಳು: 04998215615, 8547005058.




