ನವದೆಹಲಿ: ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾದ ಪರಿಣಾಮ ಸೆಪ್ಟೆಂಬರ್ ನಲ್ಲಿ ಶೇಕಡ 4.35ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್‌ಎಸ್‌ಒ) ಹೇಳಿದೆ.
ಆಗಸ್ಟ್ ನಲ್ಲಿ ಶೇಕಡ 5.30ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ ಶೇ. 4.35ಕ್ಕೆ ಇಳಿದಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಾಹಿತಿ ನೀಡಿವೆ.
ಹಣದುಬ್ಬರವು ಶೇಕಡಾ 6ಕ್ಕಿಂತ ಕಡಿಮೆ ಇರುವ ಸತತ ಮೂರನೇ ತಿಂಗಳು ಇದು. ಮೇ ಮತ್ತು ಜೂನ್ ತಿಂಗಳಲ್ಲಿ ಸಿಪಿಐ ಶೇ. 6 ಕ್ಕಿಂತ ಹೆಚ್ಚಿತ್ತು.
ಆಹಾರ ವಸ್ತುಗಳ ಹಣದುಬ್ಬರವು ಆಗಸ್ಟ್ ನಲ್ಲಿ ಶೇಕಡ 3.11ರಷ್ಟು ಇತ್ತು. ಇದು ಸೆಪ್ಟೆಂಬರ್ ನಲ್ಲಿ ಶೇಕಡ 0.68ಕ್ಕೆ ಇಳಿಕೆ ಆಗಿದೆ.




