ಎಕೆಪಿಎ ಕಾಸರಗೋಡು ಪಶ್ಚಿಮ ಘಟಕ ವಾರ್ಷಿಕ ಸಮ್ಮೇಳನ
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)ಕಾಸರಗೋಡು ಪಶ್ಚಿಮ ಘಟಕ ವಾರ್ಷಿಕ ಸಮ್ಮೇಳನ ಎಕೆಪಿಎ ಕಾಸರಗೋಡು ವಲಯ ಕಚೇರಿಯಲ್ಲಿ ಜರುಗಿತು. ವಲಯ ಅಧ್ಯಕ್ಷ ಸಂಜೀವ ರೈ ಸಮಾರಂಭ ಉದ್ಘಾಟಿಸಿದರು. ಘಟಕ ಅಧ್ಯಕ್ಷ ವಾಸು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಘಟಕ ಅಧ್ಯಕ್ಷ ಶೆರೀಫ್. ಕಾರ್ಯದರ್ಶಿ ಮನೋಹರನ್, ಸುಕು, ಸುನಿಲ್, ರಶೀದ್ ಉಪಸ್ಥಿತರಿದ್ದರು. ಈ ಸಂದರ್ಭ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶ್ರೀಕಾಂತ್ ಕಾಸರಗೋಡು ಅಧ್ಯಕ್ಷ, ವಿನೋದ್ ಉಪಾಧ್ಯಕ್ಷ, ಮನೋಜ್ ಕಾರ್ಯದರ್ಶಿ, ಅಖಿಲ್ ಜತೆಕಾರ್ಯದರ್ಶಿ ಹಾಗೂ ಅಭಿಲಾಷ್ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.
ವಲಯ ಕಾರ್ಯದರ್ಶಿ ರಾಜೇಂದ್ರನ್ ವರದಿ ವಾಚಿಸಿದರು.ಶ್ರೀಕಾಂತ್ ಸಂತಾಪ ಸಊಚಕ ಠರಾವು ಮಂಡಿಸಿದರು. ಚಂದ್ರಶೇಖರ ಸ್ವಾಗತಿಸಿದರು.




