HEALTH TIPS

ಪಿ.ಎಂ.ಜಿ.ಎಸ್.ವೈ.: ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ 7 ವಾಡ್ರ್ಗಳಿಗಾಗಿ 28.89 ಕೋಟಿ ರೂ. ಮಂಜೂರು

                   ಕಾಸರಗೋಡು: ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ(ಪಿ.ಎಂ.ಜಿ.ಎಸ್.ವೈ.) ಯೋಜನೆಯಲ್ಲಿ ಅಳವಡಿಸಿ ಸಂಸದ ರಾಜ್ ಮೋಹನ್ ಉಣ್ಣೀತ್ತಾನ್ ಅವರ ಶಿಫಾರಸು ಪ್ರಕಾರ ಕಾಸರಗೋಡು ಜಿಲ್ಲೆಯ 5 ವಾರ್ಡ್ ಗಳಿಗಾಗಿ ಮತ್ತು ಕಣ್ಣೂರು ಜಿಲ್ಲೆಯ ಪಯ್ಯನ್ನೂರು ಬ್ಲೋಕ್ ನ 2 ವಾರ್ಡ್ ಗಳಿಗಾಗಿ 28.89 ಕೋಟಿ ರೂ. ಮಂಜೂರು ಮಾಡಲಾಗಿದೆ. 

                   ಕಾಸರಗೋಡು ಜಿಲ್ಲೆಯಲ್ಲಿ 25 ಕಿಮೀ ರಸ್ತೆಗಾಗಿ 19.61 ಕೋಟಿ ರೂ., ಪಯ್ಯನ್ನೂರು ಬ್ಲೋಕ್ ನಲ್ಲಿ 10.64 ಕಿಮೀ ರಸ್ತೆಗಾಗಿ 9.29 ಕೋಟಿ ರೂ. ಮಂಜೂರು ಮಾಡಲಾಗಿದೆ. 

              ಕಾಸರಗೋಡು ಬ್ಲೋಕ್ ನ ಇಚ್ಲಂಪಾಡಿ-ಅನಂತಪುರಂ-ನಾಯ್ಕಾಪು( ಮೂರು ಕಿಮೀ) ರಸ್ತೆಗಾಗಿ 2.68 ಕೋಟಿ ರೂ., ವಿದ್ಯಾನಗರ-ನೀರ್ಚಾಲ್-ಮಾನ್ಯ (4.1ಕಿಮೀ) ರಸ್ತೆಗಾಗಿ 3.61 ಕೋಟಿ ರೂ., ಕಾಞಂಗಾಡು ಬ್ಲೋಕ್ ನ ಚಾಯೋಂ-ಚಿರಪ್ಪುರಂ-ಕಾನತ್ತುಮೂಲೆ(4.24 ಕಿಮೀ)ರಸ್ತೆಗಾಗಿ 3.47 ಕೋಟಿ ರೂ., ಕರಿಚ್ಚೇರಿ-ಮಯಿಲಾಟಿ-ಮಾಂಗಾಡ್-ದೇಳಿ(8.7 ಕಿಮೀ)ರಸ್ತೆಗಾಗಿ 6.63 ಕೋಟಿ ರೂ., ಕಾರಡ್ಕ ಬ್ಲೋಕ್ ನ ಪೈಕ-ಮಲ್ಲ-ಬೋವಿಕ್ಕಾನ ರಸ್ತೆಗಾಗಿ(5.3 ಕಿಮೀ) 3.23 ಕೋಟಿ ರೂ. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಮಂಜೂರಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries