ಕೊಟ್ಟಾಯಂ: ಕೇರಳ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಕರ್ನಾಟಕ ಬಿಜೆಪಿ ಮುಂದಾಗಿದೆ. ಮೊದಲ ಬ್ಯಾಚ್ ಟ್ರಕ್‍ಗಳು ಕರ್ನಾಟಕದಿಂದ ಪರಿಹಾರ ಸಾಮಗ್ರಿಗಳೊಂದಿಗೆ ಕೇರಳಕ್ಕೆ ಬಂದವು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಸುಧೀರ್ ಅವರು ಕೊಟ್ಟಾಯಂನಲ್ಲಿ ವಾಹನಗಳನ್ನು ಬರಮಾಡಿಕೊಂಡರು. ನಂತರ ಅವರು ವಿವಿಧ ಸ್ಥಳಗಳಿಗೆ ಲೋಡ್ ನ್ನು ಕಳಿಸಿಕೊಟ್ಟರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಮುಂಗಾರು ಮಳೆಯಿಂದ ಹಾನಿಗೊಳಗಾದವರ ಶಿಬಿರಗಳಿಗೆ ಭೇಟಿ ನೀಡಿದ್ದರು. ಪರಿಹಾರ ಕಾರ್ಯಗಳಲ್ಲಿ ಸರ್ಕಾರಿ ಯಂತ್ರದ ವೈಫಲ್ಯವನ್ನು ಅರಿತು ಬಿಜೆಪಿ ಕೇಂದ್ರ ನಾಯಕತ್ವದ ಸಹಾಯವನ್ನು ಕೋರಿತ್ತು. ಕೇಂದ್ರ ನಾಯಕತ್ವದ ಸೂಚನೆಯಂತೆ ಕರ್ನಾಟಕ ಬಿಜೆಪಿ ತಕ್ಷಣ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟಿತು.
ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚಿನ ಟ್ರಕ್‍ಗಳು ಕೇರಳ ತಲುಪಲಿವೆ ಎಂದು ಬಿಜೆಪಿ ನಾಯಕತ್ವ ಹೇಳಿಕೆ ನೀಡಿದೆ. ರಾಜ್ಯ ಸರ್ಕಾರ ತನ್ನ ಪರಿಹಾರ ಕಾರ್ಯಗಳಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪದ ನಡುವೆ ಬಿಜೆಪಿ ನಾಯಕತ್ವವು ನೆರವಿಗೆ ಬಂದಿದೆ. ಮೊದಲ ಹಂತವು ಸಂತ್ರಸ್ತರಿಗೆ ಅಗತ್ಯ ವಸ್ತುಗಳು ಮತ್ತು ಬಟ್ಟೆಗಳನ್ನು ಒಳಗೊಂಡಿದೆ. ಔಷಧಿ, ಕುಡಿಯುವ ನೀರು, ಹೊದಿಕೆಗಳು, ಬಟ್ಟೆ, ಗೃಹೋಪಯೋಗಿ ವಸ್ತುಗಳು, ಮಗುವಿನ ಆಹಾರ, ಕಲಿಕಾ ಸಾಮಗ್ರಿಗಳು ಮತ್ತು ಅಡಿಗೆ ಪಾತ್ರೆಗಳನ್ನು ಒಳಗೊಂಡಿರುತ್ತದೆ.




