ಕಾಸರಗೋಡು: ಕನ್ನಡ ಹೋರಾಟಗಾರ, ಅಧ್ಯಾಪಕ, ಕವಿ, ಲೇಖಕ, ಖ್ಯಾತ ವಿಮರ್ಶಕ, ಪತ್ರಕರ್ತ ದಿ. ಎಂ.ಗಂಗಾಧರ ಭಟ್ ಅವರ ಸಾಧನೆ ಸದಾ ಸ್ಮರಿಸುವಂತಾಲು ಸ್ಮಾರಕವೊಂದನ್ನು ನಿರ್ಮಿಸಬೇಕೆಂದು ಕಾಸರಗೋಡು ನಗರಸಭಾ ಸದಸ್ಯೆ, ನಿವೃತ್ತ ಮುಖ್ಯೋಪಾಧ್ಯಾಯಿನಿ ಸವಿತಾ ಟೀಚರ್ ಅವರು ಹೇಳಿದರು.
ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಆಶ್ರಯದಲ್ಲಿ ಕರಂದಕ್ಕಾಡ್‍ನ ಪದ್ಮಗಿರಿ ಕಲಾಕುಟೀರದಲ್ಲಿ ಗುರುವಾರ ಸಂಜೆ ಆಯೋಜಿಸಲಾದ ಎಂ.ಗಂಗಾಧರ ಭಟ್ ಸಂಸ್ಮರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಅವರ ಹೆಸರಿನಲ್ಲಿ ವಾಚನಾಲಯವನ್ನು ನಿರ್ಮಿಸುವ ಮೂಲಕ ಅವರ ಸಾಧನೆಯನ್ನು ಯುವ ಜನಾಂಗಕ್ಕೆ ದಾಟಿಸುವ ಕೆಲಸವಾಗಬೇಕೆಂದರು.
ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ, ಕವಿ ರವೀಂದ್ರನ್ ಪಾಡಿ ಅವರು ಎಂ.ಗಂಗಾಧರ ಭಟ್ ಅವರಿಗೆ ನುಡಿನಮನ ಸಲ್ಲಿಸಿದರು. ಪತ್ರಕರ್ತ ಪುರುಷೋತ್ತಮ ಭಟ್ ಕವನ ವಾಚಿಸಿದರು.
ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಟಿ.ಶಂಕರನಾರಾಯಣ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಎಂ.ಗಂಗಾಧರ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.




