ಕಾಸರಗೋಡು: ಅಸಂಘಟಿತ ವಲಯಗಳಲ್ಲಿ ಕಾರ್ಮಿಕರಾಗಿರುವ ಮಂದಿಗೆ ಇ-ಶ್ರಮ್ ಗುರುತುಚೀಟಿಗಾಗಿ ಉಚಿತ ನೋಂದಣಿ ಅಕ್ಷಯ ಕೇಂದ್ರಗಳ ಮೂಲಕ ಮತ್ತು ಕಾನ್ ಸರ್ವೀಸ್ ಸೆಂಟರ್ ಗಳ ಮೂಲಕ ಆರಂಭಿಸಲಾಗಿದೆ. ಅಸಮಗಟಿತ ವಲಯಗಳಲ್ಲಿ ಸೇರಿರುವ ಬೀದಿ ವ್ಯಾಪಾರಿಗಳು, ಕೃಷಿಕರು, ಕೃಷಿ ಕಾರ್ಮಿಕರು ಮೊದಲಾದವರಿಗೆ ಎಲ್ಲ ಸಂಸ್ಥೆಗಳಲ್ಲಿ ಲಭಿಸುವಂತಾ ಪಿ.ಎಫ್., ಇ.ಎಸ್.ಐ. ಸೌಲಭ್ಯ ಲಭಿಸದೇ ಇರುವ ಕಾರ್ಮಿಕರು, ಖಾಸಗಿ ಟ್ಯೂಷನ್/ ಕೋಚಿಂಗ್ ಸೆಂಟರ್ ಗಳನ್ನು ನಡೆಸುವ ಮಂದಿ, ಅಲ್ಲಿನ ನೌಕರರು ಇತ್ಯಾದಿ ಮಂದಿ ಇ-ಶ್ರಮ್ ಗಾಗಿ ಉಚಿತ ನೋಂದಣಿ ನಡೆಸಬಹುದು. ಅರ್ಜಿದಾರರು 16ರಿಂದ 59 ವರ್ಷದ ನಡುವಿನ ವಯೋಮಾನದವರಾಗಿರಬೇಕು. ಆದಾಯ ತೆರಿಗೆ ಪಾವತಿಸುವವರು, ಪಿ.ಎಫ್, ಇ.ಎಸ್.ಐ. ಇತ್ಯಾದಿಗಳಲ್ಲಿ ಸದಸ್ಯರಾಗಿರುವವರು ಆಗಿರಕೂಡದು. ಆಧಾರ್ ಕಾರ್ಡ್ ಗೆ ಲಿಂಕ್ ನಡೆಸಿದ ಮೊಬೈಲ್ ಫೆÇೀನ್ ನಂಬ್ರ, ಬಾಂಕ್ ಪಾಸ್ ಪುಸ್ತಕ ಸಹಿತ ಸಮೀಪದ ಅಕ್ಷಯ ಕೇಂದ್ರಗಳ ಮೂಲಕ ಯಾ ಸಿ.ಎಸ್.ಐ. ಮೂಲಕ, ನೇರವಾಗಿ ಉಚಿತ ರೂಪದ ನೋಂದಣಿ ನಡೆಸಬಹುದು.
ಇ-ಶ್ರಮ್ ಮೂಲಕ ನೋಂದಣಿ ನಡೆಸಿದ ಮಂದಿಗೆ ಅಪಘಾತದಲ್ಲಿ ಮರಣ ಸಂಭವಿಸಿದರೆ2 ಲಕ್ಷ ರೂ. ವಿಮೆ ಸಂರಕ್ಷಣೆ, ಕೇಂದ್ರ ಸರಕಾರ ಘೋಷಿಸಿರುವ ಇತರ ಆರ್ಥಿಕ ಸಹಾಯಗಳೂ ಲಭಿಸಲಿವೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದರು. ಹೆಚ್ಚುವರಿ ಮಾಹಿತಿಗಳಿಗೆ ದೂರವಾಣಿ ಸಂಖ್ಯೆಗಳು: 0467-2204602, 04994-257850.




