HEALTH TIPS

ಕ್ರೀಡಾ ಕೋಟಾದಲ್ಲಿ ನೇಮಕಾತಿ; ಕೆ.ಎಸ್.ಇ.ಬಿಯಂದ ಅರ್ಜಿ ಆಹ್ವಾನ

                                                     

                  ತಿರುವನಂತಪುರ: ಕ್ರೀಡಾ ಕೋಟಾದಲ್ಲಿ ನೇಮಕಾತಿಗಾಗಿ ಕೆ ಎಸ್ ಇ ಬಿ ಅರ್ಜಿ ಆಹ್ವಾನಿಸಿದೆ. ಬ್ಯಾಸ್ಕೆಟ್‍ಬಾಲ್ (ಪುರುಷ/ಮಹಿಳೆ), ವಾಲಿಬಾಲ್ (ಪುರುಷ/ಮಹಿಳೆ), ಫುಟ್‍ಬಾಲ್ (ಪುರುಷ) ಮತ್ತು ಟೆನಿಸ್ (ಪುರುಷ) ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ನೇಮಕಾತಿಗೆ ಪರಿಗಣಿಸಲಾಗುತ್ತದೆ.

                  ಅಭ್ಯರ್ಥಿಗಳು ಈ ವರ್ಷ ಅಥವಾ ಹಿಂದಿನ 3 ವರ್ಷಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು / ಜೂನಿಯರ್, ಯೂತ್ ಮತ್ತು ಸೀನಿಯರ್ ವಿಭಾಗಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿರಬೇಕು / ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿರಬೇಕು / ಅಂತರ ವಲಯ ಚಾಂಪಿಯನ್‍ಶಿಪ್‍ನಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರಬೇಕು / ರಾಷ್ಟ್ರೀಯ ತಂಡದ ತರಬೇತಿ ಶಿಬಿರದಲ್ಲಿ ಭಾಗವಹಿಸಿರಬೇಕು .

                   ಅಭ್ಯರ್ಥಿಗಳು 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು  24 ವರ್ಷ ಗರಿಷ್ಠ ವಯೋಮಿತಿಯಾಗಿದೆ.  ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವವರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಒಂದು ವರ್ಷ ವಿನಾಯಿತಿ ಸಿಗುತ್ತದೆ.

           ಕೆಳಗಿನ 15 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ: 

ಬಾಸ್ಕೆಟ್‍ಬಾಲ್ (ಪುರುಷರು) - 3

ಬಾಸ್ಕೆಟ್‍ಬಾಲ್ (ಮಹಿಳೆಯರು) - 2

ವಾಲಿಬಾಲ್ (ಪುರುಷರು) - 2

ವಾಲಿಬಾಲ್ (ಮಹಿಳೆಯರು) - 3

ಫುಟ್ಬಾಲ್ (ಪುರುಷರು) - 4

ಟೆನಿಸ್ (ಪುರುಷರು) - 1

                  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-11-2021 ಸಂಜೆ 5.00. ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಾಗಿ kseb ವೆಬ್‍ಸೈಟ್ (www.kseb.in) ಗೆ ಭೇಟಿ ನೀಡಬಹುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries