ತಿರುವನಂತಪುರ: ಒಟಿಟಿ ವೇದಿಕೆಯಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳುವ ಮೊದಲು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗಲಿ ಎಂದು ಸಚಿವ ಸಾಜಿ ಚೆರಿಯನ್ ಹೇಳಿರುವರು. ಇದನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವುದರಿಂದ ಚಿತ್ರರಂಗವೇ ನಾಶವಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇರಳ ಸರ್ಕಾರದ ಒಟಿಡಿ ಪ್ಲಾಟ್‍ಫಾರ್ಮ್ ಮೂರು ತಿಂಗಳೊಳಗೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ಥಿಯೇಟರ್ ಮಾಲೀಕರೊಂದಿಗೆ ನಡೆಸಿದ ಚರ್ಚೆಯಲ್ಲಿ ಹೆಚ್ಚಿನ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ. ವಿದ್ಯುತ್ ಇಲಾಖೆ, ಹಣಕಾಸು ಇಲಾಖೆ, ಸ್ಥಳೀಯಾಡಳಿತ, ಆರೋಗ್ಯ ಇಲಾಖೆ ಹೀಗೆ ನಾಲ್ಕು ಇಲಾಖೆಗಳೊಂದಿಗೆ ಈ ಕುರಿತು ಚರ್ಚೆ ನಡೆಸಬೇಕಿದೆ. ನ.2ರಂದು ಇಲಾಖೆ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮೊನ್ನೆ 27ರಿಂದ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಪರಭಾಷೆಯ ಚಿತ್ರಗಳು ತೆರೆ ಕಾಣುತ್ತಿವೆ. ಥಿಯೇಟರ್ ಪ್ರಾರಂಭವಾದ ನಂತರ ಸ್ಟಾರ್ ಮೊದಲ ಮಲಯಾಳಂ ಬಿಡುಗಡೆಯಾಗಿದೆ.




