HEALTH TIPS

ಅಂತರರಾಷ್ಟ್ರೀಯ ಹೆಲಿ ಟೂರಿಸಂ ಕೇಂದ್ರವಾಗುವ ಸಾಮರ್ಥ್ಯ ಭಾರತಕ್ಕಿದೆ: ಮಾಂಡವೀಯಾ

              ನವದೆಹಲಿ: 'ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತದಲ್ಲಿ ಆರೋಗ್ಯ ಕ್ಷೇತ್ರವು ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದ್ದು, ಅಪಾರ ಹೂಡಿಕೆಯ ಅವಕಾಶಗಳನ್ನು ಹೊಂದಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಗುರುವಾರ ಹೇಳಿದ್ದಾರೆ.

          ಸಿಐಐ ಏಷ್ಯಾ ಆರೋಗ್ಯ- 2021 ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಅಂತರರಾಷ್ಟ್ರೀಯ ಆರೋಗ್ಯ ಪ್ರವಾಸೋದ್ಯಮ ಕೇಂದ್ರವಾಗುವ (ಹೆಲಿ ಟೂರಿಸಂ) ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಖಾಸಗಿ ವಲಯವು ಹೂಡಿಕೆ ಮಾಡಲು ಅಪಾರ ಅವಕಾಶಗಳಿವೆ ಎಂದರು.

'ಹಿಂದೆ ಆರೋಗ್ಯವೆಂದರೆ ಬರೀ ಚಿಕಿತ್ಸೆ ಎನ್ನುವ ಅರ್ಥವಿತ್ತು. ಆದರೆ, ಈಗ ಈ ಕ್ಷೇತ್ರವು ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ಆರೋಗ್ಯವಂತ ಸಮಾಜ ಮಾತ್ರ ಸಮೃದ್ಧ ದೇಶವಾಗಲು ಸಾಧ್ಯ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಥಮಿಕ ಚಿಂತನೆಯಾಗಿದೆ' ಎಂದರು.

'ಆರೋಗ್ಯ ಕ್ಷೇತ್ರದ ಉತ್ತಮ ಭವಿಷ್ಯ, ಕೈಗೆಟುಕುವ ದರ, ಹೊಣೆಗಾರಿಕೆ, ಜಾಗೃತಿಗೆ ಸರ್ಕಾರ ಬದ್ಧವಾಗಿದೆ ಮತ್ತು ಈ ಉದ್ದೇಶಗಳನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ' ಎಂದೂ ಮಾಂಡವೀಯಾ ಹೇಳಿದರು.

                ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕುರಿತು ಮಾತನಾಡಿದ ಸಚಿವರು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಪ್ರಧಾನಿ ಅವರು ಕೈಗೊಂಡ ಯಶಸ್ವಿ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕೇಂದ್ರ ಸರ್ಕಾರವು ಕೈಗೊಂಡಿರುವ ವಿವಿಧ ಆರೋಗ್ಯ ಯೋಜನೆಗಳನ್ನೂ ಮಾಂಡವೀಯಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries