HEALTH TIPS

'2022 ಆಸಿಯಾನ್‌-ಭಾರತ ಸ್ನೇಹ ವರ್ಷ': ಪ್ರಧಾನಿ ಮೋದಿ ಘೋಷಣೆ

              ನವದೆಹಲಿ: ಆಸಿಯಾನ್‌ ಕೂಟ ರಾಷ್ಟ್ರಗಳ ಏಕತೆ ಮತ್ತು ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

                2022ರ ವರ್ಷವನ್ನು 'ಆಸಿಯಾನ್-ಭಾರತ ಸ್ನೇಹ ವರ್ಷ' ಎಂದು ಆಚರಿಸಲಾಗುವುದು ಎಂದು ಇದೇ ವೇಳೆ ಅವರು ಘೋಷಿಸಿದರು.‌

            ಭಾರತ-ಆಸಿಯಾನ್‌ ಶೃಂಗಸಭೆಯನ್ನು ಉದ್ದೇಶಿಸಿ ವರ್ಚುವಲ್‌ ವಿಧಾನದ ಮೂಲಕ ಮಾತನಾಡಿದ ಅವರು, ಭಾರತದ ಇಂಡೊ-ಪೆಸಿಫಿಕ್‌ ಸಾಗರಗಳ ಯೋಜನೆಯು (ಐಪಿಒಪಿ) ಇಂಡೊ-ಪೆಸಿಫಿಕ್‌ ಪ್ರದೇಶದಲ್ಲಿ ಆಸಿಯಾನ್‌ ಕೂಟದ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಮತ್ತು ಪರಸ್ಪರ ಸಹಕಾರ ನೀಡುವುದಾಗಿದೆ ಎಂದು ಅವರು ಹೇಳಿದರು.

             'ಕೋವಿಡ್‌ ಪಿಡುಗಿನಿಂದ ಭಾರತ-ಆಸಿಯಾನ್ ಕೂಟದ ಸ್ನೇಹಕ್ಕೂ ಪರೀಕ್ಷೆಯ ಸಮಯವಾಗಿತ್ತು. ಆದರೆ ಪಿಡುಗಿನ ಈ ಯುಗದಲ್ಲಿ ನಮ್ಮ ಪರಸ್ಪರ ಸಹಕಾರ, ಸಹಾನುಭೂತಿಯಿಂದ ಭವಿಷ್ಯದಲ್ಲೂ ನಮ್ಮ ಸ್ನೇಹ ಮುಂದುವರಿಯುತ್ತದೆ' ಎಂದು ಪ್ರಧಾನಿ ಮೋದಿ ಹೇಳಿದರು.

             '2022ರ ವರ್ಷದಲ್ಲಿ ನಮ್ಮ ನಡುವಿನ ಸಹಭಾಗಿತ್ವವು 30 ವರ್ಷಗಳನ್ನು ಪೂರೈಸಲಿದೆ. ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಈ ಮೈಲುಗಲ್ಲನ್ನು ಸಂಭ್ರಮಿಸಲು ನಾವು 'ಆಸಿಯಾನ್‌-ಭಾರತದ ಸ್ನೇಹ ವರ್ಷ' ಎಂದು ಆಚರಿಸಲು ನನಗೆ ಬಹಳ ಹರ್ಷವಾಗುತ್ತದೆ' ಎಂದು ಅವರು ಹೇಳಿದರು.

             10 ರಾಷ್ಟ್ರಗಳ ಆಸಿಯಾನ್‌ ಅಂತರರಾಷ್ಟ್ರೀಯ ಸಂಘಟನೆಯು ಈ ಪ್ರದೇಶದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಭಾರತ, ಅಮೆರಿಕ, ಚೀನಾ, ಜಪಾನ್‌ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ಇತರ ದೇಶಗಳು ಈ ಕೂಟದ ಪಾಲುದಾರರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries