ಕಾಸರಗೋಡು: ಜಿಲ್ಲೆಯ ಎಲ್ಲ ಕಚೇರಿಗಳ ಮಾಹಿತಿ ನೀಡುವ ಮೊಬೈಲ್ ಆಪ್ "ಎಂಡೆ ಜಿಲ್ಲ" ದ ಭಿತ್ತಿಪತ್ರ ಬಿಡುಗಡೆ ಜರುಗಿತು.
ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಸ್ವಾಗತ್ ರಣ್ ವೀರ್ ಚಂದ್ ಬಿಡುಗಡೆಗೊಳಿಸಿದರು. ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಅವರು ಮೊದಲ ಭಿತ್ತಿಪತ್ರ ಪಡೆದುಕೊಂಡರು. ಜಿಲ್ಲಾ ವಾರ್ತಾ ಕಚೇರಿ ಭಿತ್ತಿಪತ್ರ ಸಿದ್ಧಪಡಿಸಿದೆ.
ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಇನ್ ಫಾರ್ಮೆಟಿಕ್ ಅಧಿಕಾರಿ ಕೆ.ರಾಜನ್, ಹುಸೂರ್ ಶಿರಸ್ತೇದಾರ್ ಎಸ್.ಶ್ರೀಜಯ, ಪಿ.ಆರ್.ಡಿ. ಸಹಾಯಕ ಸಂಪಾದಕ ಪಿ.ಪಿ.ವಿನೀಶ್, ಸಿಬಂದಿ ಟಿ.ಕೆ.ಕೃಷ್ಣನ್, ಸಹಾಯಕ ಛಾಯಾಗ್ರಾಹಕ ನಿಧೀಶ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲೆಯ 520 ಕಚೇರಿಗಳ ವಿಳಾಸ, ದೂರವಾಣಿ ನಂಬ್ರ, ಜಿ.ಪಿ.ಎಸ್.ಲೊಕೇಶನ್ ಕಚೇರಿಯ ಚಿತ್ರ ಇತ್ಯಾದಿ ಈ ಭಿತ್ತಿಪತ್ರದಲ್ಲಿವೆ. ಗ್ರಾಮ ಕಚೇರಿಗಳು, ಅಕ್ಷಯ ಸೆಂಟರ್ ಗಳು, ಆಸ್ಪತ್ರೆಗಳು, ಉದ್ಯೋಗ ವಿನಿಮಯ ಕೇಂದ್ರಗಳು, ಸಿಬ್ಬಂದಿ ಇತ್ಯಾದಿ ಎಲ್ಲ ವಿಚಾರಗಳೂ ಇವೆ. ಜೊತೆಗೆ ಅಧಿಕೃತ ವೆಬ್ ಸೈಟ್ ಲಿಂಕ್ ಗಳೂ ಲಭಿಸಲಿವೆ.
ನ್ಯಾಷನಲ್ ಇನ್ ಫಾರ್ಮೆಟಿಕ್ ಸೆಂಟರ್ ನ ಜಿಲ್ಲಾ ಕಚೇರಿಯ ನೇತೃತ್ವದಲ್ಲಿ ಆಪ್ ಸಿದ್ಧಗೊಂಡಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಲಿಂಕ್: https://play.google.




