ಕಾಸರಗೋಡು: ದೇಶದಲ್ಲಿ 100 ಕೋಟಿ ವಾಕ್ಸಿನೇಷನ್ ಪೂರ್ತಿಗೊಳಿಸಿದ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ವಿಜಯೋತ್ಸವ ಆಚರಿಸಲಾಯಿತು.
ಕುಂಬಳೆ ಸಮಾಜ ಆರೋಗ್ಯ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ದಿವಾಕರ ರೈ ಉದ್ಘಾಟಿಸಿದರು. ಅಡ್ಮಿನಿಸ್ಟರಲ್ ಸಹಾಯಕ ವೈದ್ಯಾಧಿಕಾರಿ ಡಾ.ನಿರ್ಮಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಮಾಸ್ ಮಿಡಿಯಾ ಅಧಿಕಾರಿ ಸಯನಾ, ಆರೋಗ್ಯ ಇನ್ಸ್ ಪೆಕ್ಟರ್ ಗನ್ನಿ ಮೋಳ್, ಸಾರ್ವಜನಿಕ ಆರೋಗ್ಯ ದಾದಿ ಕುಂuಟಿಜeಜಿiಟಿeಜಮಿ ಕೆ.ವಿ., ಆರೋಗ್ಯ ದೌತ್ಯ ಜ್ಯೂನಿಯರ್ ಕನ್ಸಲ್ಟಂಟ್ ಕಮಲ್ ಕೆ.ಜೋಸ್ ಉಪಸ್ಥಿತರಿದ್ದರು. ಜಿಲ್ಲಾ ಎಜುಕೇಶನ್ ಆಂಡ್ ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಕುಂಬಳೆ ಸಮಾಜ ಆರೋಗ್ಯ ಕೇಂದ್ರದ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ವಂದಿಸಿದರು.
ಜಿಲ್ಲಾ ಮಟ್ಟದಲ್ಲಿ ಈ ವರೆಗೆ ಒಟ್ಟು 903857 ಮಂದಿಗೆ ಕೋವಿಡ್ ಪ್ರತಿರೋಧ ಲಸಿಕೆ ನೀಡಲಾಗಿದೆ. ಇವರಲ್ಲಿ 489904 ಮಂದಿಗೆ ಪೂರ್ತಿಗೊಂಡಿದೆ. ಶೇ 100 ವಾಕ್ಸಿನೇಷನ್ ನಡೆಸುವಲ್ಲಿ ಸಾರ್ವಜನಿಕರು ಪೂರ್ಣರೂಪದಲ್ಲಿ ಸಹಕರಿಸುವಂತೆ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ವಿನಂತಿಸಿದರು.




