ಕಾಸರಗೋಡು: ಅಂಚೆ ಉಳಿತಾಯ ಬ್ಯಾಂಕ್ ಸೇವೆಗಳಿಗೆ ಈಗ ಎಸ್.ಎಂ.ಎಸ್.ಸೌಲಭ್ಯ ಲಭ್ಯವಿದೆ. ಆ ಸೇವೆ ಬಳಸುವ ನಿಟ್ಟಿನಲ್ಲಿ ಖಾತೆ ಹೊಮದಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಿ ಖಾತೆಯಲ್ಲಿ ಮೊಬೈಲ್ ನಂಬ್ರ ಸೇರ್ಪಡೆಗೊಳಿಸಿರುವುದನ್ನು ಖಚಿತಪಡಿಸಬೇಕು ಎಂದು ಅಂಚೆ ವರಿಷ್ಠಾಧಿಕಾರಿ ತಿಳಿಸಿದರು.
ಅಂಚೆ ಕಚೇರಿಯ ಎಸ್.ಬಿ. ಖಾತೆಗಳಲ್ಲಿ ಇಂಟರ್ ನೆಟ್, ಮೊಬೈಲ್ ಬಾಂಕಿಂಗ್ ಸೌಲಭ್ಯಗಳು ಲಭ್ಯವಿವೆ. ಎಲ್ಲ ವಿಭಾಗದ ಖಾತೆಗಳ ಪಾಸ್ ಪುಸ್ತಕಗಳನ್ನು ಜಾಗರೂಕವಾಗಿರಿಸಬೇಕು. ಪ್ರತಿ ವ್ಯವಹಾರಗಳನ್ನು ಖಾತೆ ಪುಸ್ತಕದಲ್ಲಿ ನಿಖರವಾಗಿ ನಮೂದಿಸಬೇಕು. ಆರ್.ಡಿ. ಏಜೆಂಟ್ ರ ಮುಖಾಂತರ ಹಣ ಪಾವತಿಸುವ ಮಂದಿ ಪ್ರತಿ ತಿಂಗಳೂ ಠೇವಣಿ ಪುಸ್ತಕ ದಲ್ಲಿ ದಾಖಲಾತಿಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸಂಶಯಾಸ್ಪದ ರೀತಿಯ ಯಾವುದೇ ವ್ಯವಹಾರಗಳಿದ್ದಲ್ಲಿ ಯಾ ಮೊಬಲಗಿನಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಂಚೆ ವರಿಷ್ಠಾಧಿಕಾರಿಯ ಕಚೇರಿಯನ್ನು ಸಂಪರ್ಕಿಸಬೇಕು.




