ತಿರುವನಂತಪುರ: ಒಟಿಡಿಗಾಗಿ ಸಿನಿಮಾ ಮಾಡಿದರೆ ಅದು ಚಿತ್ರದ ಅಂತ್ಯ ಎಂದು ಹಿರಿಯ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಹೇಳಿದ್ದಾರೆ. ಒಟಿಡಿಗಳಲ್ಲಿ ಚಿತ್ರಗಳನ್ನು ಬಿಡುಗಡೆಮಾಡುವುದರಿಂದ ಪ್ರೇಕ್ಷಕರ ಸಿನಿಮಾ ಬಗೆಗಿನ ಅನುಭವವನ್ನು ಅಳಿಸಿಹಾಕುತ್ತವೆ. ಬೇರೆ ಯಾವುದೇ ದಾರಿಯಿಲ್ಲದ ಕಾರಣ ಜನರು ಪ್ರಸ್ತುತ ಒಡಿಟಿಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಅಡೂರ್ ಹೇಳಿದರು. ಸಂಸದ ಶಶಿ ತರೂರ್ ಅವರು ಅಡೂರ್ ಅವರೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ.
ಸಣ್ಣ ಪರದೆಯ ಮೇಲೆ ಚಲನಚಿತ್ರವನ್ನು ನೋಡುವುದು ಸ್ವತಃ ದುಃಖಕರವಾಗಿದೆ. ಸಿನಿಮಾವನ್ನು ಥಿಯೇಟರ್‍ಗಳಲ್ಲಿ ನೋಡಬೇಕು. ಆ ಅನುಭವವು ಮೊಬೈಲ್ ಪರದೆ ಅಥವಾ ಲ್ಯಾಪ್‍ಟಾಪ್‍ನಲ್ಲಿ ಸಾಧ್ಯವಾಗದು. ಪ್ರತಿ ಫ್ರೇಮ್ ನಿರ್ದಿಷ್ಟ ಸಂಖ್ಯೆಯ ಸೆಕೆಂಡುಗಳ ಕಾಲ ಪ್ರೇಕ್ಷಕರ ಮುಂದೆ ಇರುತ್ತದೆ. ದೊಡ್ಡ ಪರದೆಯ ಮೇಲೆ ನೋಡಿದಾಗ, ವೀಕ್ಷಕನಿಗೆ ಅದನ್ನು ವೀಕ್ಷಿಸಲು ಸಾಕಷ್ಟು ಸಮಯವಿರುತ್ತದೆ. "ನೀವು ನಿಜವಾಗಿಯೂ ಸಣ್ಣ ಪರದೆಯಲ್ಲಿ ಚಲನಚಿತ್ರವನ್ನು ನೋಡುವುದಿಲ್ಲ" ಎಂದು ಅಡೂರ್ ಹೇಳಿದರು.
ಪಾತ್ರಗಳು ಮಾತನಾಡುವುದನ್ನು ಮಾತ್ರ ನೀವು ಕೇಳಬಹುದು. ಕಾರ್ಟೂನ್ ಪಾತ್ರಗಳಂತೆಯೇ ನೀವು ಪರದೆಯ ಮೇಲೆ ಚಲನೆಗಳನ್ನು ನೋಡುತ್ತೀರಿ. ಆ ದೃಶ್ಯಾನುಭವದಲ್ಲಿ ಬೇರೇನೂ ಇಲ್ಲ. ನಿಮ್ಮ ಮೊಬೈಲ್ ಪೋನ್‍ನಲ್ಲಿ ಚಲನಚಿತ್ರವನ್ನು ನೀವು ನೋಡಿದರೆ, ನೀವು ಚಲನಚಿತ್ರವನ್ನು ನಿಜವಾದ ಅರ್ಥದಲ್ಲಿ ನೋಡುವುದಿಲ್ಲ. ಅದನ್ನು ನೋಡಿದರೆ ಅವರ ಕೆಲಸಕ್ಕೆ ದೊಡ್ಡ ಅನ್ಯಾಯ ಮಾಡುತ್ತಿದ್ದೀರಿ ಎಂದು ಅಡೂರ್ ಗಮನ ಸೆಳೆದರು.
ಬೇರೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲದ್ದರಿಂದ ಒಟಿಡಿ ಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ವೀಕ್ಷಕರು ಗತ್ಯಂತರವಿಲ್ಲದೆ ವೀಕ್ಷಿಸಬೇಕಾಯಿತು. ಆದರೆ ಹೀಗೆ ಮಾಡುವ ಮೂಲಕ ಸಿನಿಮಾದ ನೈಜ ಅನುಭವವನ್ನೂ ಪ್ರೇಕ್ಷಕರಿಂದ ದೂರ ಮಾಡಿದಂತಾಗುತ್ತದೆ. ಒಟಿಡಿ ಬಿಡುಗಡೆಗೂ ಮುನ್ನವೇ ಚಿತ್ರ ನಿರ್ಮಾಣವಾಗುತ್ತಿರುವುದು ನಿರಾಸೆ ತಂದಿದೆ. ಅದು ಚಿತ್ರದ ಅಂತ್ಯವಾಗಿರುತ್ತದೆ. ಚಿತ್ರಮಂದಿರದಲ್ಲಿ ಜನಸಂದಣಿಯೊಂದಿಗೆ ನೋಡಲೇಬೇಕು. ಒಟಿಡಿ ಆ ಸಾಮಾಜಿಕ ಅನುಭವವನ್ನೂ ಕಸಿದುಕೊಳ್ಳುತ್ತದೆ ಎಂದು ಅಡೂರ್ ಹೇಳಿದರು.




