ಬೆಂಗಳೂರು : ಪುನೀತ್ ಗಳಿಸಿದ ಪ್ರೀತಿ, ಅಭಿಮಾನಕ್ಕೆ ಇನ್ನೂ ಮುಗಿಯದ ಸಂತಾಪ, ಕಂಠೀರವ ಸ್ಟೇಡಿಯಂ ಸುತ್ತ ಇರುವ ಜನಸಾಗರವೇ ಸಾಕ್ಷಿ. ಪುನೀತ್ ರಾಜ್ಕುಮಾರ್ ನಿಧನಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆ, ಬಿಬಿಸಿ ವಾಹಿನಿ ಕೂಡ ಸಂತಾಪ ಸೂಚಿಸಿದೆ.
ಕನ್ನಡ ಚಿತ್ರರಂಗದ ಗಣ್ಯರು, ದಕ್ಷಿಣ ಭಾರತದ ನಟರು ಮಾತ್ರವಲ್ಲದೆ, ಬಾಲಿವುಡ್ ಮಂದಿ, ಕ್ರಿಕೆಟ್ ಆಟಗಾರರು ಕೂಡ ಪುನೀತ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಭಜರಂಗಿ 2 ಸಿನಿಮಾ ಪ್ರಿ ರಿಲೀಸ್ ಸಮಾರಂಭದಲ್ಲಿ ಯಶ್, ಶಿವರಾಜ್ಕುಮಾರ್ ಜೊತೆಗೆ ಪವರ್ಫುಲ್ ಆಗಿಯೇ ಕಾಣಿಸಿಕೊಂಡಿದ್ದ ಪುನೀತ್, ನಿನ್ನೆ (ಅಕ್ಟೋಬರ್ 29) ಇದ್ದಕ್ಕಿದ್ದಂತೆ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಪುನೀತ್ ಗಳಿಸಿದ ಪ್ರೀತಿ, ಅಭಿಮಾನಕ್ಕೆ ಇನ್ನೂ ಮುಗಿಯದ ಸಂತಾಪ, ಕಂಠೀರವ ಸ್ಟೇಡಿಯಂ ಸುತ್ತ ಇರುವ ಜನಸಾಗರವೇ ಸಾಕ್ಷಿ.
ಪುನೀತ್ ರಾಜ್ಕುಮಾರ್ ನಿಧನಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆ, ಬಿಬಿಸಿ ವಾಹಿನಿ ಕೂಡ ಸಂತಾಪ ಸೂಚಿಸಿದೆ. ಪುನೀತ್ ಅಭಿಮಾನಿಗಳೆಲ್ಲಾ ಶಾಕ್ನಲ್ಲಿ ಇದ್ದಾರೆ. ದಿನದ ಹಿಂದಷ್ಟೇ ಅವರು ಸ್ಟೇಜ್ನಲ್ಲಿ ಪರ್ಫಾರ್ಮ್ ಮಾಡಿದ್ದರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ಅತ್ಯಂತ ಪ್ರತಿಭಾನ್ವಿತ ವ್ಯಕ್ತಿ ಆಗಿದ್ದರು. ಅವರ ನಿಧನದಿಂದ ಇಡೀ ಕರ್ನಾಟಕದಲ್ಲಿ ಶೋಕದ ವಾತಾವರಣ ಇದೆ. ಅಷ್ಟೊಂದು ಸಂಖ್ಯೆಯಲ್ಲಿ ಜನರು ಬರುತ್ತಿರುವುದು, ಆಸ್ಪತ್ರೆ ಆವರಣದಲ್ಲಿ ಜನರು ನಿಂತಿರುವುದು ಅವರ ಬಗ್ಗೆ ಅಭಿಮಾನಿಗಳಿಗೆ ಇದ್ದ ಪ್ರೀತಿ ತೋರಿಸುತ್ತದೆ ಎಂದು ಪರಿಸ್ಥಿತಿಯ ಬಗ್ಗೆ ಬಿಬಿಸಿ ನ್ಯೂಸ್ನಲ್ಲಿ ಹೇಳಲಾಗಿದೆ.
ಪುನೀತ್ ರಾಜ್ಕುಮಾರ್ ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಬಾಲನಟನಾಗಿ, ತಂದೆ ಡಾ. ರಾಜ್ಕುಮಾರ್ ಜೊತೆಗೆ ಅಭಿನಯಿಸಿದರು. ಕೇವಲ ನಟ ಮಾತ್ರವಲ್ಲದೆ, ಗಾಯಕರಾಗಿ ಕೂಡ ಹೆಸರು ಮಾಡಿದ್ದರು. ಬಹಳಷ್ಟು ಸಾಮಾಜಿಕ ಹಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ಈಗ ತಂದೆಯಂತೆಯೇ ತಮ್ಮ ನೇತ್ರದಾನ ಮಾಡಿದ್ದಾರೆ. ಈ ಸುದ್ದಿ ನನಗೂ ನಂಬಲು ಕಷ್ಟವಾಗುತ್ತಿದೆ ಎಂದು ಬಿಬಿಸಿ ನ್ಯೂಸ್ನಲ್ಲಿ ಪ್ರತಿನಿಧಿ ಹೇಳಿದ್ದಾರೆ.




