HEALTH TIPS

ಶಾಲಾರಂಭ: ವಿದ್ಯಾರ್ಥಿಗಳ ಪ್ರಯಾಣ ಸಮಸ್ಯೆಗೆ ಪರಿಹಾರ: ಜಿಲ್ಲಾಧಿಕಾರಿ

                   ಕುಂಬಳೆ: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರಯಾಣ ಸೌಲಭ್ಯ ಸಭೆಯು ಶಾಲೆಗಳ ಪುನರಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬಸ್ ಪ್ರಯಾಣದ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿತು. ನವೆಂಬರ್ 1ರಿಂದ ಮೊದಲ ವಾರದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು ನೀಡಿದ ಗುರುತಿನ ದಾಖಲೆಯನ್ನು ಬಳಸಿ ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಸಬಹುದು. ಸರ್ಕಾರದಿಂದ ಸೂಕ್ತ ಮಾರ್ಗದರ್ಶನ ಪಡೆದು ಒಂದು ವಾರದ ನಂತರ ಮೋಟಾರು ವಾಹನ ಇಲಾಖೆಯಿಂದ ಪಾಸ್ ನೀಡಲಾಗುವುದು.

                 ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಯಾಣ ರಿಯಾಯಿತಿ ನೀಡುವಂತೆ ಕೇರಳ ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪತ್ರ ಕಳುಹಿಸಲಿದ್ದಾರೆ. ಎಷ್ಟು ಶಾಲಾ ಬಸ್‍ಗಳು ಸಂಚರಿಸುತ್ತಿವೆ ಎಂಬುದರ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಆರ್‍ಟಿಒ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

                 ಸಂಸದ ಹಾಗೂ ಶಾಸಕರ ನಿಧಿಯಿಂದ ಕಳೆದ ಆರು ವರ್ಷದೊಳಗೆ ಖರೀದಿಸಿರುವ ಬಸ್ ಗಳ ಸಂಖ್ಯೆ, ಎಷ್ಟು ಓಡುತ್ತಿವೆ, ಉಳಿದವು ಏಕೆ ಓಡುತ್ತಿಲ್ಲ ಎಂಬ ವಿವರವಾದ ವರದಿಯನ್ನು ಮೋಟಾರು ವಾಹನ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲ ಶಾಲೆಗಳ ಮುಂದೆ ಪೋಲೀಸರನ್ನು ನಿಲ್ಲಿಸಲು ಸದ್ಯಕ್ಕೆ ಸಾಧ್ಯವಾಗದಿದ್ದಲ್ಲಿ ಆಯಾ ಆಡಳಿತ ಮಂಡಳಿಗಳು ಟ್ರಾಫಿಕ್ ಗಾರ್ಡ್‍ಗಳನ್ನು ನೇಮಿಸಬೇಕು. ಬಸ್ಸಿನ ಸಿಬ್ಬಂದಿ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಲು ಅನುಮತಿಸಲಾಗದು. 

                      ಚಂದ್ರಗಿರಿ-ದೇಳಿ ರಾಷ್ಟ್ರೀಯ ಮಾರ್ಗದಲ್ಲಿ ಪ್ರಯಾಣ ರಿಯಾಯಿತಿಯನ್ನು ಅನುಮತಿಸಲಾಗುವುದು ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಕೇರಳ ಆರ್ ಟಿಸಿ ನೀಡಿರುವ ಪಾಸ್ ಗಳ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಗುಡ್ಡಗಾಡು ಪ್ರದೇಶಗಳಾದ ಪಾಣತ್ತೂರು, ಬಳಂತೋಡು, ಎಳೇರಿಯಲ್ಲಿ ಪ್ರಯಾಣ ಸಮಸ್ಯೆ ಬಗೆಹರಿಸಬೇಕು. ಇದಕ್ಕಾಗಿ ನಿಲ್ಲಿಸಿರುವ ಬಸ್‍ಗಳನ್ನು ರಸ್ತೆಗಿಳಿಸುವಂತೆ ಸೂಚಿಸಲಾಯಿತು. ಶಾಲೆ ಆರಂಭಕ್ಕೂ ಮುನ್ನ ಖಾಸಗಿ ಬಸ್ ಮಾಲೀಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ವಿಶೇಷ ಸಭೆ ನಡೆಸಿ ಸೌಹಾರ್ದಯುತವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

            ಆರ್ ಟಿಒ ಎ.ಕೆ.ರಾಧಾಕೃಷ್ಣನ್ ವರದಿ ಮಂಡಿಸಿದರು. ಎನ್‍ಫೆÇೀರ್ಸ್‍ಮೆಂಟ್ ಆರ್‍ಟಿಒ ಎಂ.ಜೆ.ಡೇವಿಸ್, ಡಿಡಿಇ ಪುಷ್ಪಾ ಕೆ.ವಿ., ಕಾಸರಗೋಡು ಸರ್ಕಾರಿ ಕಾಲೇಜು ಉಪ ಪ್ರಾಂಶುಪಾಲ ಡಾ.ಹರಿಕುರುಪ್, ಡಿಸಿಆರ್‍ಬಿ ಡಿವೈಎಸ್ಪಿ ಯು. ಪ್ರೇಮನ್, ಕೆಎಸ್‍ಆರ್‍ಟಿಸಿ ಎಟಿಒ ನಿಶಿಲ್, ಬಸ್ ಮಾಲೀಕರ ಸಂಘದ ಮುಖಂಡರಾದ ಕೆ.ಗಿರೀಶ್, ಸತ್ಯನ್ ಪೂಚಕ್ಕಾಡ್, ಕೆ.ರವಿ, ವಿದ್ಯಾರ್ಥಿ ಸಂಘದ ಮುಖಂಡರಾದ ಅಲ್ಬಿನ್ ಮ್ಯಾಥ್ಯೂ, ಕೆ.ವಿ.ಎಸ್. ಹರಿದಾಸ್ ಪೆರುಂಬಳ, ನಿತಿನ್ ಕುಮಾರ್ ಬಿ, ವಿಷ್ಣು ಮರಕ್ಕಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.3



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries