HEALTH TIPS

ವಾಹನಗಳಲ್ಲಿ ಸಂಗೀತಮಯ ಹಾರನ್ ಅಳವಡಿಸಲು ಕಾನೂನು, ಸರಿಯೇ?

                  ನವದೆಹಲಿ: 'ಹಾರ್ನ್ ನಾಟ್ ಓಕೆ ಪ್ಲೀಸ್' ಎನ್ನುತ್ತಾ ಹಾರನ್ ಇಲ್ಲದ ಸೋಮವಾರ ಅಭಿಯಾನ ನೆನಪಿರಬಹುದು. ವಾರದಲ್ಲಿ ಒಂದೇ ಒಂದು ದಿನ ಕರ್ಕಶ ಹಾರನ್ ಮಾಡುವುದನ್ನು ನಿಲ್ಲಿಸಲು ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈಗ ವಾಹನಗಳಲ್ಲಿ ಸಂಗೀತಮಯ ಹಾರನ್ ಅಳವಡಿಸಲು ಕಾನೂನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

             ನಾಸಿಕ್‍ನಲ್ಲಿ ಹೆದ್ಧಾರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರು, ವಾಹನಗಳಲ್ಲಿ ಇನ್ನು ಮುಂದೆ ಸಂಗೀತಮಯ ಹಾರನ್ (ಶಬ್ದ) ಅಳವಡಿಸಲು ಅಗತ್ಯ ಕಾನೂನು ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಘೋಷಿಸಿದ್ದಾರೆ. ಆಯಂಬ್ಯುಲೆನ್ಸ್ ಮತ್ತು ಪೊಲೀಸ್ ಅಧಿಕಾರಿಗಳ ವಾಹನಗಳಲ್ಲಿ ಬಳಸುವ ಸೈರನ್‍ಗಳನ್ನು ಬದಲಾವಣೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಆಯಂಬ್ಯುಲೆನ್ಸ್, ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರ ವಾಹನಗಳಲ್ಲಿ ಬಳಸುವ ಸೈರನ್‍ಗಳು ಕಿರಿಕಿರಿ ಉಂಟು ಮಾಡುತ್ತಿವೆ, ಕರ್ಕಶ ಶಬ್ದಗಳು ಕಿವಿಗೂ ಹಾನಿ ಮಾಡುತ್ತಿವೆ. ಅವುಗಳ ಬದಲಿಗೆ ಆಕಾಶವಾಣಿಯಲ್ಲಿ ಮುಂಜಾನೆ ಕೇಳಿ ಬರುವ ಮಧುರವಾದ ಸಂಗೀತವನ್ನು ಅಳವಡಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.

                                               ಕೆಂಪುದೀಪಗಳಿಗೆ ಅಂತ್ಯ :

              ಸಚಿವರು ಸೇರಿದಂತೆ ಗಣ್ಯ ವ್ಯಕ್ತಿಗಳ ವಾಹನಗಳ ಮೇಲೆ ಕೆಂಪುದೀಪ ಹಾಗೂ ಶಬ್ದ ಬಳಕೆಗೆ ಅನುಮತಿ ಇದ್ದರೂ, ಈ ಪದ್ಧತಿ ಅಂತ್ಯ ಹಾಡಲು ನಿರ್ಧರಿಸಿರುವುದಾಗಿ ಗಡ್ಕರಿ ತಿಳಿಸಿದ್ದಾರೆ. ಭಾರತೀಯ ಸಂಗೀತಗಾರರು ನುಡಿಸಿರುವ ತಬಲಾ, ಕೊಳಲು, ವಯಲಿನ್, ಹಾರ್ಮೋನಿಯಂ, ಬಾಯಲ್ಲಿ ಸೃಷ್ಟಿಸಲಾದ ಸಂಗೀತದ ಟೋನ್‍ಗಳನ್ನು ಹಾರ್ನ್ ಆಗಿ ವಾಹನಗಳಲ್ಲಿ ಬಳಸಲಾಗುತ್ತದೆ. ದಾರಿ ಕೇಳಲು ಸಂಗೀತಮಯ ಹಾರ್ನ್ ಶಬ್ದ ಕೇಳಲು ಹಿತಕರವಾಗಿರಲಿದೆ, ಯಾವ ರೀತಿ ಶಬ್ದ ಸೂಕ್ತ ಎಂಬುದರ ಬಗ್ಗೆ ಅಗತ್ಯ ಕಾನೂನು ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

                                ಕರ್ಕಶ ಶಬ್ದದ ಹಾರನ್‍ ನಾಟ್ ಓಕೆ

             ವಾಹನಗಳಲ್ಲಿ ಕರ್ಕಶ ಶಬ್ದ, ಮಗು ಅಳುವ ಶಬ್ದ, ಪ್ರಾಣಿಗಳ ಶಬ್ದ ಮಾಡುವ ಹಾರನ್‍ಗಳನ್ನು ಬಳಸದಂತೆ ನಿರ್ಬಂಧ ವಿಧಿಸಿ ಹಲವು ಬಾರಿ ನ್ಯಾಯಾಲಯಗಳು ಆದೇಶ ಹೊರಡಿಸಿವೆ. ಸಾರಿಗೆ ನಿಯಮಾವಳಿಗಳ ಬದಲಾವಣೆ ಮಾಡಲಾಗಿದ್ದು, ನ್ಯಾಯಾಲಯಗಳು ಹಲವಾರು ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಕರ್ಕಶ ಶಬ್ದಗಳ ಕಿರಿಕಿರಿಯನ್ನು ತಪ್ಪಿಸಲಾಗುತ್ತಿದೆ ಎಂದರು. ಜೊತೆಗೆ ವಾಹನಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ನೋಂದಣಿ ಫಲಕದ ಜೊತೆಯಲ್ಲಿ ಅಳವಡಿಕೆ ಮಾಡಲಾದ ನಾಮಫಲಕಗಳನ್ನು ತೆರವು ಮಾಡಲು ಸೂಚನೆ ನೀಡಿದೆ.

             ಸಚಿವರು ಸೇರಿದಂತೆ ಗಣ್ಯ ವ್ಯಕ್ತಿಗಳು ಬಳಕೆ ಮಾಡುವ ಕೆಂಪು ದೀಪಗಳ ಬಳಕೆಗೂ ಸ್ಪಷ್ಟ ಸೂಚನೆ ನೀಡಲಾಗಿದೆ. ಈಗ ಕೇಂದ್ರ ಸರ್ಕಾರವೇ ಇದಕ್ಕೆಲ್ಲ ಅಂತ್ಯ ಹಾಡಲಿದ್ದು, ಹಾರ್ನ್ ಬಳಕೆ ಬಗ್ಗೆ ಸ್ಪಷ್ಟ ಕಾನೂನು ರೂಪಿಸಲು ಮುಂದಾಗಿದೆ. ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಎಷ್ಟೆ ಬಿಗಿ ಕ್ರಮಗಳನ್ನು ಗಾಳಿಗೆ ತೂರಿದರೆ ತಕ್ಕ ಶಿಕ್ಷೆ ಕಾದಿದೆ. ವಾಹನಗಳಲ್ಲಿ ಕಿರಿಕಿರಿ ಹಾರ್ನ್ ಬಳಸುವುದು ನಿರ್ಬಂಧವಾಗಿದ್ದರೂ, ಕಾನೂನು ಮೀರುವವರು ಕಂಡು ಬರುತ್ತಾರೆ, ಈಗ ಸಂಗೀತಮಯ ಹಾರ್ನ್ ಹಾಕಿದರೆ ಕಿರಿಕಿರಿ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.

                 ಸುಮಧುರ ಸಂಗೀತವುಳ್ಳ ಹಾರನ್ ಅಳವಡಿಸಿದರೆ ಏನಾಗಬಹುದು ಎಂಬುದರ ಬಗ್ಗೆ ಚರ್ಚೆ ನಡೆದಿದ್ದು, ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರು ತಮ್ಮದೇ ಶೈಲಿಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವಿತ ಯೋಜನೆಯನ್ನು ಕಿಚಾಯಿಸಿದ್ದಾರೆ. ಶಾಸ್ತ್ರೀಯ ಸಂಗೀತ ಕಚೇರಿ ವಿಡಿಯೋವೊಂದನ್ನು ಇನ್ಸ್ಟಾಗ್ರಾಂ/ಕೂನಲ್ಲಿ ಹಂಚಿಕೊಂಡಿದ್ದಾರೆ.

            ವಾಯುಮಾಲಿನ್ಯಕ್ಕಿಂತಲೂ ಅಪಾಯಕಾರಿ ಈ ಶಬ್ದಮಾಲಿನ್ಯ. ಇದರಿಂದ ಹೆಚ್ಚಿನ ತೊಂದರೆ ಅನುಭವಿಸುವುದೇ ಪುಟಾಣಿ ಮಕ್ಕಳು. ಅನಗತ್ಯ ಶಬ್ದದ ಕಿರಿಕಿರುಯಿಂದ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಮನೆಯಲ್ಲಿ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಂದಿ ವಾಹನ ಓಡಿಸುವ ವೇಳೆ ಅದನ್ನು ಮರೆತುಬಿಡುತ್ತಾರೆ.

               ಶಬ್ದಮಾಲಿನ್ಯದಿಂದಾಗಿ ಕಿವುಡುತನ, ಅತಿ ಮಾನಸಿಕ ಒತ್ತಡ, ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಅನಗತ್ಯ ಕಿರಿಕಿರಿ ಹಾಗೂ ನಿದ್ರಾಹೀನತೆ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗಲಿವೆ. ವಿಶೇಷವಾಗಿ ಬೆಳೆಯುವ ಮಕ್ಕಳ ಆರೋಗ್ಯದ ಮೇಲೂ ಶಬ್ದಮಾಲಿನ್ಯ ಅಡ್ಡಪರಿಣಾಮ ಗ್ಯಾರಂಟಿ. ಜತೆಗೆ ಮಕ್ಕಳು ಸೂಕ್ಷ್ಮತೆ ಕಳೆದುಕೊಳುವ ಆತಂಕ ಎದುರಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries