HEALTH TIPS

ಸಿವೋಟರ್ ಸರ್ವೇ: ದೇಶದ ಮೂರು 'ಕೆಟ್ಟ' ಮುಖ್ಯಮಂತ್ರಿಗಳ ಪಟ್ಟಿ

                ಜನರ ನಾಡಿಮಿಡಿತವನ್ನು ಅರಿಯುವ ಸಮೀಕ್ಷೆ ನಡೆಸುವ ಸಿವೋಟರ್, ದೇಶದ ಅತ್ಯುತ್ತಮ ಮುಖ್ಯಮಂತ್ರಿ ಮತ್ತು ಕೆಟ್ಟ ಮುಖ್ಯಮಂತ್ರಿಗಳು ಯಾರು ಎನ್ನುವುದರ ಬಗ್ಗೆ ತಮ್ಮ ಸಮೀಕ್ಷಾ ವರದಿಯನ್ನು ಬಹಿರಂಗಗೊಳಿಸಿದೆ. ಪ್ರಮುಖವಾಗಿ, ರಾಜಕೀಯ ಕ್ಷೇತ್ರದ ವಿಚಾರದಲ್ಲಿ ಸರ್ವೇ ನಡೆಸುವ ಸಿವೋಟರ್ ಈ ಸಮೀಕ್ಷೆಯನ್ನು ಐಎಎನ್‌ಎಸ್ ಜೊತೆ ಜಂಟಿಯಾಗಿ ಮಾಡಿದೆ.

               ಕಳೆದ ಸೆಪ್ಟಂಬರ್ ತಿಂಗಳಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಎದುರಿಸಬೇಕಾಗಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಜನರ ಒಲವು ಯಾರತ್ತ ಇದೆ ಎನ್ನುವುದರ ಬಗ್ಗೆ ಸಿವೋಟರ್-ಎಬಿಪಿ ನ್ಯೂಸ್ ಜಂಟಿಯಾಗಿ ಸರ್ವೇ ನಡೆಸಿತ್ತು. ಅದರ ಪ್ರಕಾರ, ಪಂಜಾಬ್ ನಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಸೂಕ್ತ ಮುಖ್ಯಮಂತ್ರಿ ಎನ್ನುವ ಫಲಿತಾಂಶ ಬಂದಿತ್ತು.


              ಈಗ ದೇಶದ ಉತ್ತಮ ಮತ್ತು ಕೆಟ್ಟ ಮುಖ್ಯಮಂತ್ರಿ ಸರ್ವೇಯ ಬಗ್ಗೆ ಮಾತನಾಡುತ್ತಿದ್ದ ಸಿವೋಟರ್ ಸಿಇಒ ಯಶವಂತ್ ದೇಶಮುಖ್, "ನಮ್ಮ ತಂಡ ಜನರನ್ನು ಸಂಪರ್ಕಿಸಿದಾಗ ದೇಶದ ಕೆಲವು ಮುಖ್ಯಮಂತ್ರಿಗಳು ಸರಕಾರದಿಂದ ತಪ್ಪಾಗಿದ್ದರೆ, ಅದನ್ನು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದರೂ, ಅಧ್ಯಕ್ಷೀಯ ಆಡಳಿತ ಪದ್ದತಿಯಿದ್ದರೆ ಒಳ್ಲೆಯದು ಎನ್ನುವ ಅಭಿಪ್ರಾಯ ಬಂದಿದೆ" ಎಂದು ದೇಶಮುಖ್ ಹೇಳಿದ್ದಾರೆ.

              "ಕಳೆದ ವರ್ಷ ಅಂದರೆ 2020ರಲ್ಲಿ ಲಿಂಗ ಸಮಾನತೆಯ ವಿಚಾರದಲ್ಲಿ ಛತ್ತೀಸ್‌ಗಢ 43 ಪಾಯಿಂಟ್ ಅನ್ನು ಪಡೆದು ದೇಶದಲ್ಲಿ ಏಳನೇ ಸ್ಥಾನದಲ್ಲಿತ್ತು. ಈ ಬಾರಿ 61 ಅಂಕಗಳಿಸಿ ಮೊದಲನೇ ಸ್ಥಾನದಲ್ಲಿದೆ. ಈ ರಾಜ್ಯದ ಮುಖ್ಯಮಂತ್ರಿ ಸಿಇಒ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಜನರಿಗೆ ಇಷ್ಟವಾಗಿದೆ" ಎಂದು ಸಿವೋಟರ್ ಸಿಇಒ ಯಶವಂತ್ ದೇಶಮುಖ್ ಹೇಳಿದ್ದಾರೆ. ದೇಶದ ಅತ್ಯುತ್ತಮ ಮುಖ್ಯಮಂತ್ರಿ ಮತ್ತು ಕೆಟ್ಟ ಮುಖ್ಯಮಂತ್ರಿ ಯಾರು?

               ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಅತ್ಯುತ್ತಮ ಮುಖ್ಯಮಂತ್ರಿ

               ಸಿವೋಟರ್- ಐಎಎನ್‌ಎಸ್ ಸಮೀಕ್ಷೆಯ ಪ್ರಕಾರ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಕೇವಲ ಶೇ. 6ರಷ್ಟು ಜನ ಮಾತ್ರ ಬಘೇಲ್ ಆಡಳಿತ ಶೈಲಿಯನ್ನು ವಿರೋಧಿಸಿದ್ದಾರೆ. ಮಕ್ಕಳಿಗೆ ಉಚಿತ ಶಿಕ್ಷಣ, ಮಹತಾರಿ ದುಲಾರ್ ಯೋಜನೆ ಮುಂತಾದವು ಬಘೇಲ್ ಜನಪ್ರಿಯತೆಯನ್ನು ಹೆಚ್ಚಿಸಿದೆ. 543 ಲೋಕಸಭಾ ಕ್ಷೇತ್ರದ ಸುಮಾರು ಮೂವತ್ತು ಸಾವಿರ ಜನರನ್ನು ಸಂಪರ್ಕಿಸಿ ಈ ಸಮೀಕ್ಷೆಯನ್ನು ಸಿವೋಟರ್- ಐಎಎನ್‌ಎಸ್ ನಡೆಸಿದೆ.

            ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಎರಡನೇ ಸ್ಥಾನ, ಮೂರನೇ ಸ್ಥಾನ ಪಟ್ನಾಯಕ್

             ಛತ್ತೀಸ್‌ಗಢ ಮುಖ್ಯಮಂತ್ರಿ ಮೊದಲನೇ ಸ್ಥಾನದಲ್ಲಿದ್ದರೆ, ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಎರಡನೇ ಸ್ಥಾನದಲ್ಲಿದ್ದಾರೆ. ಶೇ. 10.1ರಷ್ಟು ಜನ ಇವರ ಕಾರ್ಯಶೈಲಿಯನ್ನು ವಿರೋಧಿಸಿದ್ದಾರೆ. ಇದಾದ ನಂತರದ ಅಂದರೇ ಮೂರನೇ ಸ್ಥಾನದಲ್ಲಿ ಒಡಿಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಇದ್ದಾರೆ. ಶೇ.10.4ರಷ್ಟು ಜನ ಇವರ ಆಡಳಿತದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿಲ್ಲ.

               ಕೆಟ್ಟ ಸಿಎಂಗಳ ಪೈಕಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೊದಲನೇ ಸ್ಥಾನ

           ಸಿವೋಟರ್- ಐಎಎನ್‌ಎಸ್ ಸಮೀಕ್ಷೆಯ ಪ್ರಕಾರ ದೇಶದ ಕೆಟ್ಟ ಮುಖ್ಯಮಂತ್ರಿಗಳ ಪೈಕಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೊದಲನೇ ಸ್ಥಾನದಲ್ಲಿದ್ದಾರೆ. ಶೇ. 30.3ರಷ್ಟು ಜನ ಇವರ ಕಾರ್ಯಶೈಲಿಗೆ ಸಿಟ್ಟಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಅಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇಲ್ಲದಿಲ್ಲ ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿದೆ. ಅವರ ಪುತ್ರ ಮತ್ತು ಸಚಿವರೂ ಆಗಿರುವ ಕೆ.ಟಿ.ರಾಮ ರಾವ್ ಅವರನ್ನು ಸಿಎಂ ಆಗಿ ಘೋಷಿಸಿದರೆ ಪಕ್ಷಕ್ಕಾಗುವ ಸಂಭಾವ್ಯ ಹಿನ್ನಡೆಯನ್ನು ತಪ್ಪಿಸಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕೆಟ್ಟ ಮುಖ್ಯಮಂತ್ರಿಗಳ ಪಟ್ಟಿ: 2ನೇಸ್ಥಾನ ಯೋಗಿ ಆದಿತ್ಯನಾಥ್, 3ನೇ ಸ್ಥಾನ ಪ್ರಮೋದ್ ಸಾವಂತ್

            ಕೆಟ್ಟ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು. ಶೇ. 28.10ರಷ್ಟು ಜನ ಇವರ ಆಡಳಿತದ ಬಗ್ಗೆ ಸಮಾಧಾನವನ್ನು ಹೊಂದಿಲ್ಲ. ಮೂರನೇ ಸ್ಥಾನ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಇವರ ಕಾರ್ಯಶೈಲಿಯ ವಿರುದ್ದ ಶೇ. 27.70 ಜನ ಮಾತನಾಡಿದ್ದಾರೆ. ಕರ್ನಾಟಕ ಮತ್ತು ಪಂಜಾಬ್ ನಲ್ಲಿ ಹೊಸ ಮುಖ್ಯಮಂತ್ರಿ ಬಂದಿರುವುದರಿಂದ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಸಮೀಕ್ಷೆಯಲ್ಲಿ ಹೇಳಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries