ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಲಹೆಗಾರರಾಗಿ ಅಮಿತ್ ಖರೆ ನೇಮಕವಾಗಿದ್ದಾರೆ.
ಉನ್ನತ ಶಿಕ್ಷಣ ಕಾರ್ಯದರ್ಶಿ ಆಗಿದ್ದ ಅಮಿತ್ ಖರೆ, ಕಳೆದ ತಿಂಗಳು ಐಎಎಸ್ ನಿಂದ ನಿವೃತ್ತಿ ಹೊಂದಿದ್ದರು. ಕ್ಯಾಬಿನೇಟ್ ನೇಮಕಾತಿ ಸಮಿತಿಯ ಅನುಮೋದನೆ ಹಾಗೂ ಅಧಿಕೃತ ಆದೇಶದ ಪ್ರಕಾರ ಅವರನ್ನು ನಿಯೋಜನೆ ಮಾಡಲಾಗಿದೆ.
ಎರಡು ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಶ್ರೇಣಿಯಲ್ಲಿ ಕಾರ್ಯಭಾರ ಮಾಡಲಿದ್ದಾರೆ.
ಅಮಿತ್ ಖರೆ 1985ರ ಬ್ಯಾಚ್ ನ ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿ. ಐಐಎಂ ಅಹಮದಾಬಾದ್ ನಿಂದ ಎಂಬಿಎ ಪದವಿ ಪಡೆದಿದ್ದಾರೆ.



