ಕಾಸರಗೋಡು: ಕೇಂದ್ರ ಹವಾಮಾನ ಇಲಾಖೆ ತಿಳಿಸುರುವ ಮುನ್ನೆಚ್ಚರಿಕೆ ಪ್ರಕಾರ ರಾಜ್ಯದ ವಿವಿಧೆಡೆ ಅತಿಪ್ರಬಲ ಮಳೆ ಸುರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ ಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳೂ ಪೂರ್ಣಾವಧಿ ಮುನ್ನೆಚ್ಚರಿಕೆಯಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಭಂಡಾರಿ ರಣ್ ವೀರ್ ಸ್ವಾಗತ್ ಚಂದ್ ಆದೇಶ ಪ್ರಕಟಿಸಿದ್ದಾರೆ.
ಯಾವ ಸಂದಿಗ್ಧ ಪರಿಸ್ಥಿತಿಯನ್ನೂ ಎದುರಿಸುವ ನಿಟ್ಟಿನಲ್ಲಿ ಫಸ್ಟ್ ರೆಸ್ಪಾಂಡರ್ಸ್ ಎಂಬ ನಿಟ್ಟಿನಲ್ಲಿ ಪೆÇಲೀಸ್, ಅಗ್ನಿ ಶಾಮಕದಳ, ಗ್ರಾಮಾಧಿಕಾರಿಗಳ ಸಹಿತ ಕಂದಾಯ ವ್ಯವಸ್ಥೆ, ಸ್ಥಳೀಯಾಡಳಿತ ಸಂಸ್ಥೆಗಳ ಸಹಿತ ಎಲ್ಲ ಇಲಾಖೆಗಳೂ ಸಜ್ಜೀಕರಣ ನಡೆಸಬೇಕಿದೆ ಎಂದವರು ಆದೇಶದಲ್ಲಿ ತಿಳಿಸಿದರು.
ನೆರೆ/ಬಂಡೆ ಉರುಳುವಿಕೆ/ ಮಣ್ಣು ಕುಸಿತ ಸಾಧ್ಯತೆಯ ಪ್ರದೇಶಗಳನ್ನು ಪತ್ತೆ ಮಾಡಿ, ಅಲ್ಲಿನ ಜನತೆಗಾಗಿ ಸುರಕ್ಷಿತ ತಾಣಗಳಲ್ಲಿ ಆಶ್ರಿತ ಶಿಬಿರಗಳನ್ನು ಸಜ್ಜುಗೊಳಿಸಬೇಕು. ಧ್ವನಿವರ್ದಕ ಮೂಲಕ ಉದ್ಘೋಷಣೆ ನಡೆಸಿ ಜನಜಾಗೃತಿ ಮೂಡಿಸಬೇಕು. ಅಗತ್ಯವಿದ್ದಲ್ಲಿ ಸ್ಥಳೀಯ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ಸಂಬಂದ ಪಟ್ಟ ಪಂಚಾಯತ್
ಕಾರ್ಯದರ್ಶಿಗಳು, ಗ್ರಾಮಾಧಿಕಾರಿಗಳು ಈ ವಿಚಾರದಲ್ಲಿ ಅಗತ್ಯದ ಕ್ರಮ ಖಚಿತಪಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಸಾರ್ವಜನಿಕರೂ ಈ ನಿಟ್ಟಿನಲ್ಲಿ ಅತೀವ ಜಾಗರೂಕತೆ ಪಾಲಿಸುವಂತೆ ಅವರು ಸಲಹೆ ಮಾಡಿದ್ದಾರೆ.




