HEALTH TIPS

108 ವರ್ಷಗಳ ನಂತರ ಕೆನಡಾದಿಂದ ತವರಿಗೆ ಮರಳಿದ ಅನ್ನಪೂರ್ಣ ದೇವಿಯ ವಿಗ್ರಹ ವಾರಣಾಸಿಯಲ್ಲಿ ಪ್ರತಿಷ್ಠಾಪನೆ

                ವಾರಣಾಸಿ: 108 ವರ್ಷಗಳ ನಂತರ ಕೆನಡಾದಿಂದ ಭಾರತಕ್ಕೆ ಮರಳಿ ತರಲಾದ ಅನ್ನಪೂರ್ಣ ದೇವಿಯ ವಿಗ್ರಹವನ್ನು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸೋಮವಾರ ಪ್ರತಿಷ್ಠಾಪಿಸಲಾಯಿತು. ಈ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದರು.

            ಇದೇ ವೇಳೆ ದೇವಾಲಯದ ಪುನರ್ನಿರ್ಮಾಣದ ಸಮಯದಲ್ಲಿ ತೆಗೆದುಹಾಕಲಾದ ಇತರ ಐದು ದೇವತೆಗಳ ವಿಗ್ರಹಗಳನ್ನು ಸಹ ಪ್ರತಿಷ್ಠಾಪಿಸಲಾಗಿದೆ. ದೇವಿಯ ವಿಗ್ರಹವನ್ನು ಬೆಳ್ಳಿಯ ಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಸಿಎಂ ಯೋಗಿ ಆದಿತ್ಯನಾಥ್ ಸಹ ಪಲ್ಲಕ್ಕಿಗೆ ಹೆಗಲು ಕೊಟ್ಟರು.

                   ಬೆಳಗ್ಗೆ ದುರ್ಗಕುಂಡದ ಕೂಷ್ಮಾಂಡ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಆರಂಭವಾಯಿತು. ಬಳಿಕ ದೇವಾಲಯದ ಈಶಾನ್ಯ ಮೂಲೆಯಲ್ಲಿ ಸ್ತೋತ್ರಗಳ ಪಠಣದ ನಡುವೆ ಸ್ಥಾಪಿಸಲಾಯಿತು.

                ಸುಮಾರು ಒಂದು ಶತಮಾನದ ಹಿಂದೆ ಭಾರತದಿಂದ ಕಳವು ಮಾಡಲಾದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾದಿಂದ ಮರಳಿ ತರಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು. ಅದರಂತೆ ವಿಗ್ರಹ ಭಾರತಕ್ಕೆ ಮರಳಿದ್ದು, ಈಗ ವಾರಣಾಸಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.

           108 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಇದು ಕೈಯಿಂದ ಕೈಗೆ ಬದಲಾವಣೆ ಹೊಂದುತ್ತಾ ಕಡೆಗೆ ಕೆನಡಾದ ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯ ತಲುಪಿತ್ತು. ಕೆನಡಾ ವಿಶ್ವವಿದ್ಯಾನಿಲಯದಿಂದ ವಿಗ್ರಹ ಮರಳಿಸುವ ಭಾರತ ಸರ್ಕಾರದ ಮನವಿಗೆ ಮನ್ನಣೆ ಸಿಕ್ಕದೆ. ಈಗ ಮತ್ತೆ ಅನ್ನಪೂರ್ಣೆ ತನ್ನ ಸ್ಥಾನ ಸೇರಿದ್ದಾಳೆ.



    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries