ಚುನಾವಣಾ ಆಯೋಗಕ್ಕೆ ಬಿಜೆಪಿಯು ಸಲ್ಲಿಸಿರುವ ಚುನಾವಣಾ ವೆಚ್ಚದ ವರದಿಯಲ್ಲಿ ಈ ಮಾಹಿತಿ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 161 ಕೋಟಿ ರೂ. ವೆಚ್ಚ ಮಾಡಿದೆ. ತಮಿಳುನಾಡಿನಲ್ಲಿ 22.97 ಕೋಟಿ ರೂ.ವೆಚ್ಚ ಮಾಡಿದೆ. ಕೇರಳದಲ್ಲಿ 29.24, ಅಸ್ಸಾಂನಲ್ಲಿ 43.81 ಕೋಟಿ ಮತ್ತು ಪುದುಚೇರಿಯಲ್ಲಿ 4.79 ಕೋಟಿ ರೂ. ವೆಚ್ಚ ಮಾಡಿದೆ.
ಬಿಜೆಪಿಯು ಹೆಚ್ಚು ವೆಚ್ಚ ಮಾಡಿರುವ ರಾಜ್ಯಗಳಲ್ಲಿ ಸೋಲುಕಂಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕೇರಳದಲ್ಲಿ ಎಲ್‌ಡಿಎಫ್ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿವೆ. ಕೇರಳ ಮತ್ತು ತಮಿಳಿನಾಡಿನಲ್ಲಿ ಹೆಚ್ಚು ವೆಚ್ಚ ಮಾಡಿದ್ದರೂ ಬಿಜೆಪಿ ಗೆಲುವಿನ ಹತ್ತಿರ ಬರಲು ಸಾಧ್ಯವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಂಡ ಟಿಎಂಸಿಯು, ಈ ಚುನಾವಣೆಗೆ 154.28 ಕೋಟಿ ರೂ. ವೆಚ್ಚ ಮಾಡಿದ್ದಾಗಿ ಘೋಷಿಸಿಕೊಂಡಿದೆ.

