ಎನ್ ಜಿ ಒ ಸಂಘಟನೆಯೊಂದು ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣ ಯೋಜನೆಗಳಿಂದ ಗುಡ್ಡ ಕುಸಿತ, ಭೂ ಕುಸಿತ ಅಪಾಯಗಳು ತಲೆದೋರಿವೆ ಎಂದು ಹೇಳಿ ಯೋಜನೆಗೆ ತಡೆಯೊಡ್ಡುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ನಡೆದ ವಿಚಾರಣೆಗೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಹಾಜರಾಗಿದ್ದರು.
ಭಾರತದ ಬ್ರಹ್ಮೋಸ್ ಕ್ಷಿಪಣಿ 42 ಅಡಿ ಉದ್ದವಿದೆ, ಅದನ್ನು ಸಾಗಿಸಲು ಬೃಹತ್ತಾದ ವಾಹನಗಳು ಬೇಕು. ಈ ದೊಡ್ಡ ದೊಡ್ಡ ವಾಹನಗಳು ಸಾಗಲು ದೊಡ್ಡ ದೊಡ್ಡ ರಸ್ತೆಗಳು ಬೇಕು. ಹೀಗಾಗಿ ರಸ್ತೆ ಅಗಲೀಕರಣ ಅತ್ಯಗತ್ಯ. ಒಂದು ವೇಳೆ ಭಾರತ ಚೀನಾ ನಡುವೆ ಯುದ್ಧ ನಡೆದಲ್ಲಿ ನಮ್ಮ ಕ್ಷಿಪಣಿಗಳನ್ನು ಅವುಗಳನ್ನು ಉಡಾವಣೆಗೊಳಿಸುವ ಲಾಂಚರ್ ಗಳನ್ನು ಗಡಿಗೆ ಸಾಗಿಸುವುದು ಹೇಗೆಈಂದು ವೇಣುಗೋಪಾಲ್ ಇದೇ ವೇಳೆ ಪ್ರಶ್ನಿಸಿದರು.
ಭೂಕುಸಿತ ಇರಲಿ, ಗುಡ್ಡ ಕುಸಿತವಿರಲಿ ಪ್ರವಾಹವೇ ಬರಲಿ ದೇಶದ ಭದ್ರತೆಯ ವಿಚಾರಕ್ಕೆ ಬಂದಾಗ ಭಾರತೀಯ ಸೈನಿಕರು ಯಾವುದೇ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಗಡಿಯನ್ನು ತಲುಪಲು ಸಿದ್ಧರಾಗುತ್ತಾರೆ.

