ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರದ ವಾರ್ಷಿಕೋತ್ಸವವು ಡಿಸೆಂಬರ್ 28ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಂದಿರದಲ್ಲಿ ಶನಿವಾರ ನಡೆದ ಭಜನಾ ಸೇವೆಯ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸೇವಾಸಮಿತಿಯ ಅಧ್ಯಕ್ಷ ಉದಯಕುಮಾರ್ ಮೈಕುರಿ, ಕಾರ್ಯದರ್ಶಿ ಕೃಷ್ಣ ನಾಯ್ಕ ಮಲ್ಲಡ್ಕ, ಕೋಶಾಧಿಕಾರಿ ರವಿಚಂದ್ರ ಓಣಿಯಡ್ಕ ಹಾಗೂ ಪದಾಧಿಕಾರಿಗಳಾದ ಮಂಜುನಾಥ ಡಿ.ಮಾನ್ಯ, ನಾರಾಯಣ ನಾಯ್ಕ ಮೈಕ್ಕುರಿ, ರವೀಂದ್ರ ಮಾಸ್ತರ್, ಮಹೇಶ, ಗಣೇಶ ಕೃಷ್ಣ ಅಳಕ್ಕೆ, ಬಾಲಸುಬ್ರಹ್ಮಣ್ಯ, ಬಾಲಕೃಷ್ಣ, ಗಂಗಾಧರ, ಸುರೇಶ್, ಗುರುಸ್ವಾಮಿಗಳಾದ ರಮೇಶ್ ಬೇಳ, ಬಾಲಸುಬ್ರಹ್ಮಣ್ಯ ನೀರ್ಚಾಲು, ಮಾತೃಮಂಡಳಿಯ ಅಧ್ಯಕ್ಷೆ ಜಯಶ್ರೀ, ಮಿತ್ರಮಂಡಳಿಯ ಜನಾರ್ದನ ನಾಯ್ಕ ಹಾಗೂ ಸಮಿತಿಯ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.



