ಮುಳ್ಳೇರಿಯ: ರಾಜ್ಯದಲ್ಲಿ ಪ್ರತಿ ವರ್ಷ ಹಲವು ಮಕ್ಕಳು ಕಾಣೆಯಾಗುತ್ತಿದ್ದಾರೆ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನಾಗುತ್ತಿದೆ, ಯಾರು ಕರೆದುಕೊಂಡು ಹೋಗುತ್ತಿದ್ದಾರೆ ಮತ್ತು ಅವರನ್ನು ಎಲ್ಲಿ ಬಳಸುತ್ತಿದ್ದಾರೆ ಎಂಬ ವಿಷಯದಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ಮಕ್ಕಳ ರಕ್ಷಣಾ ತಂಡದ ರಾಜ್ಯಾಧ್ಯಕ್ಷ ಸಿ.ಕೆ.ನಾಸರ್ ಕಾಞಂಗಾಡ್ ಆಗ್ರಹಿಸಿದ್ದಾರೆ.
ಮಕ್ಕಳ ರಕ್ಷಣಾ ತಂಡದ ಆರನೇ ಸಂಸ್ಥಾಪನಾ ದಿನದ ಅಂಗವಾಗಿ ಶನಿವಾರ ಕಾಞಂಗಾಡ್ ಮಾಣಿಕೋತ್ ನಲ್ಲಿರುವ ಕಚೇರಿ ಎದುರು ಧ್ವಜಾರೋಹಣ ನೆರವೇರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ಸಂಬಂಧ ಮುಖ್ಯಮಂತ್ರಿ, ಮಕ್ಕಳ ಹಕ್ಕು ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗುವುದು. ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ರಾಜ್ಯದಲ್ಲಿ ವಿಶೇಷ ಪಡೆ ರಚಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಾರ್ಯದರ್ಶಿ ಶಾಜಿ ಪಿ ಕೋಝಿಕ್ಕೋಡ್ ಮುಖ್ಯ ಅತಿಥಿಗಳಾಗಿದ್ದರು.
ಅಬ್ದುಲ್ ಖಾದರ್ ಪರಪ್ಪಳ್ಳಿ, ಬದ್ರುದ್ದೀನ್ ಚಳಿಯಂಕೋಡ್, ಮರಿಯಾ ಕುಂಞÂ್ಞ ಕೊಳವಯಲ್ ಮೊದಲಾದವರು ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಮಳಿಕ್ಕಲ್ ಸ್ವಾಗತಿಸಿ ವಂದಿಸಿದರು.




