ಪೆರ್ಲ : ಸ್ವಾವಲಂಬನೆಯ ಉದ್ದೇಶದಿಂದ ಎಣ್ಮಕಜೆ ಗ್ರಾಮ ಪಂಚಾಯತಿನ 2021-22ನೇ ವರ್ಷದ ಯೋಜನೆಯಂತೆ ಸಾಮಾನ್ಯ ವಿಭಾಗದವರಿಗೆ ಕೋಳಿ ಮರಿ ವಿತರಣೆ ನಡೆಸಲಾಯಿತು.
ಪೆರ್ಲ ಮೃಗಾಸ್ಪತ್ರೆ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಣ್ಮಕಜೆ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ , ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್,ಜಯಶ್ರೀ ಕುಲಾಲ್, ಪಂ.ಸದಸ್ಯ ಮಹೇಶ್ ಭಟ್, ಪಂ.ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ವೆಟರ್ನರಿ ಸರ್ಜನ್ ಬ್ರಿಜಿತ್ ಮೊದಲಾದವರು ಪಾಲ್ಗೊಂಡಿದ್ದರು 1ರಿಂದ 8ನೇ ವಾರ್ಡಿನ ಜನರಲ್ ವಿಭಾಗದ ಫಲಾನುಭವಿಗಳಿಗೆ ಸಾಕಾಣೆಗಾಗಿ ತಲಾ 5ಕೋಳಿ ಮರಿಯಂತೆ ವಿತರಿಸಲಾಯಿತು.
9ರಿಂದ 17ರ ವರೆಗಿನ ವಾರ್ಡಿನ ಫಲಾನುಭವಿಗಳಿಗೆ ನವಂಬರ್ 30ರಂದು ವಿತರಿಸಲಾಗುತ್ತದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




