ಮಧೂರು: ಕುತ್ಯಾಳ ಶ್ರೀಗೋಪಾಲಕೃಷ್ಣ ದೇವರ ಸನ್ನಿಧಿಯಿಂದ ಹೊರಟ ಚಿಕ್ಕ ಮೇಳದ ಪರ್ಯಟನೆ ಇತ್ತೀಚೆಗೆ ಸಮಾರೋಪಗೊಂಡಿತು. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರದಲ್ಲಿ ಸೇವಾ ರೂಪದ ಪ್ರದರ್ಶನ ನಡೆಯಿತು. ಜೊತೆಗೆ ಚಿಕ್ಕಮೇಳದ ದೇವರನ್ನು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಕೂಡ್ಲು ಶಾನುಭೋಗರಿಗೆ ಒಪ್ಪಿಸಲಾಯಿತು. ಜೊತೆಗೆ ಚಿನ್ನದ ಸರ ಹಾಗೂ ರಜತ ಪುಷ್ಪವನ್ನು ಶ್ರೀಕ್ಷೇತ್ರದ ದೇವರಿಗೆ ಕೂಡ್ಲು ಚಿಕ್ಕ ಮೇಳದ ವ್ಯವಸ್ಥಾಪಕ ಪ್ರಕಾಶ್ ನಾಯಕ್ ನೀರ್ಚಾಲು ಸಮರ್ಪಿಸಿದರು.




