ಕಾಸರಗೋಡು: ತ್ಯಾಜ್ಯ ನಿಯಂತ್ರಣ ಮಂಡಳಿಯ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ಇಬ್ಬರು ಕಮರ್ಶಿಯಲ್ ಅಪ್ರೆಂಟೀಸ್‍ಗಳ ನೇಮಕಾತಿ ಗುತ್ತಿಗೆ ಆಧಾರದಲ್ಲಿ ನಡೆಯಲಿದೆ. ಈ ಸಂಬಂಧ ಸಂದರ್ಶನ ಡಿ.1ರಂದು ಬೆಳಗ್ಗೆ 10.30ಕ್ಕೆ ಕಾಞಂಗಾಡು ರೈಲ್ವೇನಿಲ್ದಾಣ ಬಳಿಯ ರಾಜ್ಯ ತ್ಯಾಜ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. ಯಾವುದೇ ಅಂಗೀಕೃತ ವಿವಿಯಿಂದ ಪದವಿ, ಸರ್ಕಾರಿ ಅಂಗೀಕೃತ ಸಂಸ್ಥೆಯಿಂದ ಪಿ.ಜಿ.ಡಿ.ಸಿ.ಎ. ಡಿಪೆÇ್ಲಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಯಾ ತತ್ಸಮಾನ ಅರ್ಹತೆ ಹೊಂದಿರುವವರು ಭಾಗವಹಿಸಬಹುದು. ವಯೋಮಿತಿ 26 ವರ್ಷ. ಅರ್ಹರು ಬಯೋಡಾಟಾ, ಅರ್ಹvಪತ್ರಗಳ ನಕಲು, ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ಸಹಿತ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04672201180)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




