ತಿರುವನಂತಪುರ: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ. ಸಕ್ಕರೆ, ಅಕ್ಕಿ, ಬೇಳೆಕಾಳುಗಳಂತಹ ದಿನಸಿ ಸಾಮಗ್ರಿಗಳ ಬೆಲೆ 4 ರಿಂದ 35 ರೂ. ಏರಿಕೆಯಾಗಿದೆ. ಹಲವು ವಸ್ತುಗಳ ಬೆಲೆ ವಾರದಲ್ಲಿ ಹತ್ತರಿಂದ ಇಪ್ಪತ್ತು ಏರಿಕೆಯಾಗಿದೆ.
ರಾಜ್ಯದಲ್ಲಿ ಸುರಿದ ಭಾರಿ ಮಳೆ ಮತ್ತು ಇಂಧನ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚಾಗಿದೆ. ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು. ಬೀನ್ಸ್, ಅರಿಶಿನ ಮತ್ತು ಸಾಸಿವೆ ಅತ್ಯಂತ ದುಬಾರಿಯಾಗಿದೆ. ಹುಣಸೆಹಣ್ಣು, ಚಹಾ ಪುಡಿ ಮತ್ತು ಸಾಬೂನುಗಳ ಬೆಲೆಯೂ ಏರಿಕೆಯಾಗಿದೆ. ಕೋಝಿಕ್ಕೋಡ್ ಸಗಟು ಮಾರಾಟ ಮಳಿಗೆಗಳಲ್ಲಿ ವಾರದ ಹಿಂದೆ ಕೆ.ಜಿ.ಗೆ 90 ರೂ.ಗಳಿದ್ದ ಕಾಳು ಈಗ ಕೆಜಿಗೆ 110 ರೂ.ಏರಿಕೆಯಾಗಿದೆ.
ಅರಿಶಿಣ ಕೆಜಿಗೆ 130 ರೂ.ನಿಂದ 150 ರೂ.ಗೆ ಏರಿದೆ. ಸಾಸಿವೆ ಕೆಜಿಗೆ 15 ರಿಂದ 105 ರೂ.ಆಗಿದೆ. 110 ರೂ.ಗಳಿದ್ದ ಕೊತ್ತಂಬರಿ ಸೊಪ್ಪಿನ ಇಂದಿನ ಬೆಲೆ 120.ರೂ.ವಿಗೆ ಏರಿಕೆಯಾಗಿದೆ. 85 ರೂ.ಗಳಿದ್ದ ಹಸಿ ಕಡಲೆ ಬೆಲೆ ಇಂದು 95 ರೂ.ವಿಗೆ ಏರಿಕೆಯಾಗಿದೆ. ಚಿಲ್ಲರೆ ವ್ಯಾಪಾರಿಗಳು ಈ ಬೆಲೆಯಿಂದ 10 ರಿಂದ 15 ರೂ.ಗಳ ವರೆಗೆ ಏರಿಕೆಗೊಳಿಸಿ ಮಾರಾಟಮಾಡುತ್ತಾರೆ. ಮಟ್ಟ, ಕರುವ ಸಹಿತ ಎಲ್ಲಾ ವಿಧದ ಅಕ್ಕಿಯ ಬೆಲೆ ಕಿಲೋ ಒಂದಕ್ಕೆ ಕನಿಷ್ಠ 2 ರೂ.ಗಳಷ್ಟು ಹೆಚ್ಚಳಗೊಂಡಿದೆ.




