ತಿರುವನಂತಪುರ: ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಸಪ್ತತಿ ವರ್ಷ(೭೦ ರ ಹರೆಯ) ದ ಅಂಗವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದರು. ಮುಖ್ಯಮಂತ್ರಿಗಳು ಫೇಸ್ ಬುಕ್ ಮೂಲಕ ರಾಜ್ಯಪಾಲರನ್ನು ಅಭಿನಂದಿಸಿದ್ದಾರೆ.
ಗೌರವಾನ್ವಿತ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಪ್ತತಿ ಪ್ರವೇಶಿಸಿದ್ದು ಅವರಿಂದ ಶುಭಾಶಯಗಳು. ಕೇರಳದ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಗೆ ರಚನಾತ್ಮಕ ಬೆಂಬಲ ನೀಡಿದ ರಾಜ್ಯಪಾಲರಿಗೆ ನಾನು ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಅವರಿಗೆ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಪಿಣರಾಯಿ ವಿಜಯನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.




