ತಿರುವನಂತಪುರ: ಕೇರಳದಲ್ಲಿ ಸಿನಿಮಾ ಪ್ರವಾಸೋದ್ಯಮ ಆರಂಭಿಸಲಾಗುವುದು ಎಂದು ಸಚಿವ ಪಿ.ಎ.ಮೊಹಮ್ಮದ್ ರಿಯಾಜ್ ಹೇಳಿರುವರು. ಮೊಹಮ್ಮದ್ ರಿಯಾಜ್ ಅವರ ಫೇಸ್‍ಬುಕ್ ಪೋಸ್ಟ್‍ನ ಪ್ರಕಾರ, ಕಿರೀಟಂ ಚಿತ್ರದಲ್ಲಿ ಮೋಹನ್‍ಲಾಲ್ ಅವರ ಭಾವನಾತ್ಮಕ ದೃಶ್ಯಗಳು ಮತ್ತು ಬಾಂಬೆ ಚಿತ್ರದಲ್ಲಿ ಉಯಿರೆ ಹಾಡನ್ನು ಚಿತ್ರೀಕರಿಸಿದ ಬೇಕಲ ಸೇರಿದಂತೆ ಪಾಲಂ ನಂತಹ ಅನೇಕ ಸ್ಥಳಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಈ ಯೋಜನೆಯನ್ನು ಸಂಸ್ಕøತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಸಿದ್ಧಪಡಿಸುತ್ತಿದೆ. ಚಲನಚಿತ್ರ ತಾರೆಯರನ್ನು ಸೇರಿಸುವ ಮೂಲಕ ಚಲನಚಿತ್ರ ಪ್ರವಾಸೋದ್ಯಮ ಯೋಜನೆಯನ್ನು ಹೆಚ್ಚಿಸುವ ಭರವಸೆ ಇದೆ. ಈ ನಿಟ್ಟಿನಲ್ಲಿ ಸಿನಿಮಾ ಕ್ಷೇತ್ರದ ಗಣ್ಯರ ಜತೆ ಚರ್ಚೆ ನಡೆಸಲಾಗುವುದು. ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರೊಂದಿಗೆ ನಡೆದ ಸಭೆಯಲ್ಲಿ ಎರಡು ಇಲಾಖೆಗಳು ಸಿನಿಮಾ ಪ್ರವಾಸೋದ್ಯಮ ಯೋಜನೆಯನ್ನು ಶೀಘ್ರದಲ್ಲಿಯೇ ಸಾಕಾರಗೊಳಿಸಲು ನಿರ್ಧರಿಸಿವೆ ಎಂದು ಮೊಹಮ್ಮದ್ ರಿಯಾಜ್ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.




